ಬಸವರಾಜ ಹೊರಟ್ಟಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಯ ಗರಿ

Prasthutha|

ಬೆಂಗಳೂರು: ಭಾರತೀಯರ ವಿಶ್ವ ದಾಖಲೆಯ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​​​​ ಪಟ್ಟಿಯಲ್ಲಿ ವಿಧಾನಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಹೆಸರು ಸೇರ್ಪಡೆ ಮಾಡಲಾಗಿದೆ. 2024ನೇ ಸಾಲಿನ ವಾರ್ಷಿಕ ಪುಸ್ತಕ ಇದೀಗ ಪ್ರಕಟವಾಗಿದ್ದು, ಬಸವರಾಜ ಹೊರಟ್ಟಿ ಅವರ ದಾಖಲೆಗಳನ್ನು ಪ್ರಕಟಿಸಲಾಗಿದೆ. ಹೊರಟ್ಟಿ ಅವರು ವಿಧಾನ ಪರಿಷತ್ ಪ್ರವೇಶಿಸಿ ಇಂದಿಗೆ 43 ವರ್ಷ 201 ದಿನಗಳಾಗಿವೆ.

- Advertisement -

1980 ರಿಂದ ಸ್ಪರ್ಧಿಸಿದ ಎಲ್ಲಾ ಚುನಾವಣೆಗಳಲ್ಲಿ ಜಯ ಗಳಿಸಿದ ಅಂಕಿ ಸಂಖ್ಯೆಗಳು ಹಾಗೂ ಇನ್ನಿತರ ಮಾಹಿತಿಯನ್ನು ಪ್ರಕಟಿಸಲಾಗಿದೆ.

ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ ಅವರ ಹೆಸರು ಹಲವಾರು ದಾಖಲೆಗಳಲ್ಲಿ ನಮೂದಾಗಿದ್ದು, ಪ್ರಮುಖವಾಗಿ ಈಗಾಗಲೇ ಲಂಡನ್ನಿನ ವಲ್ರ್ಡ್ ಬುಕ್ ಆಫ್ ದಾಖಲೆ ಗರಿ 2022 ರಲ್ಲಿ ದೊರಕಿದೆ. ಭಾರತದ ಚುನಾವಣಾ ಆಯೋಗದಲ್ಲಿ ಇವರ ಸುದೀರ್ಘ ಸೇವಾ ಅವಧಿಯ ದಾಖಲೆಗಳು ಅಂಕಿ ಸಂಖ್ಯಾ ಇಲಾಖೆಯಲ್ಲಿ ದಾಖಲಿಕರಣಗೊಂಡು ಗೆಜೆಟ್‍ನಲ್ಲಿ ಪ್ರಕಟವಾಗಿವೆ.

- Advertisement -

ಶಿಕ್ಷಕರೊಬ್ಬರು ಶಿಕ್ಷಕರ ಪ್ರತಿನಿಧಿಯಾಗಿ ಹಲವಾರು ಖಾತೆಗಳ ಸಚಿವರಾಗಿ ಮೂರನೇ ಬಾರಿ ಸಭಾಪತಿಗಳಾಗಿ ಸೇವೆ ಸುತ್ತಿರುವುದು ಇತಿಹಾಸ. ಬಸವರಾಜ ಹೊರಟ್ಟಿ ಅವರು ನಾಡಿನ ಶಿಕ್ಷಕ ಸಮೂಹದ ಸ್ವಾಭಿಮಾನದ ಸಂಕೇತ. ಇವರ ಸಾಧನೆಯನ್ನು ಲಿಮ್ಕಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ಪ್ರಕಟಿಸಿದ್ದು ಅವರ ಹಲವಾರು ಹಿತೈಷಿಗಳಿಗೆ, ಅಭಿಮಾನಿಗಳಿಗೆ ಹಾಗೂ ಶಿಕ್ಷಕರ ಸಮೂಹಕ್ಕೆ ಹರ್ಷ ತಂದಿದೆ.

ಬಸವರಾಜ ಹೊರಟ್ಟಿ ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿದ್ದು, ಜೂನ್ 2022 ರಲ್ಲಿ ಅವರು ದಾಖಲೆಯ ಎಂಟನೇ ಬಾರಿಗೆ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಮರು ಆಯ್ಕೆಯಾಗುವು ಮೂಲಕ ಇತಿಹಾಸ ಬರೆದಿದ್ದರು.



Join Whatsapp