ಯೋಗಿ ಆದಿತ್ಯನಾಥ್ ಗೆ ಪಿಂಡ ಅರ್ಪಿಸಿ ಅಂತ್ಯಕ್ರಿಯೆ । ಯುವಕನ ವಿರುದ್ಧ ಪ್ರಕರಣ ದಾಖಲು

Prasthutha|

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಂತ್ಯಕ್ರಿಯೆ ನಡೆಸಿದ ಯುವಕನನ್ನು ಬಂಧಿಸಲಾಗಿದೆ. ರಿಯೋಠಿಯ ದಾಲ್‌ಚಾಪ್ರಾ ನಿವಾಸಿ ಬ್ರಿಜೇಶ್ ಯಾದವ್ ಪೊಲೀಸರಿಂದ ಬಂಧಿತನಾದ ಯುವಕ. ಯುವಕನು ಗಂಗಾ ನದಿಯ ತೀರದಲ್ಲಿ ಆದಿತ್ಯನಾಥ್ ಚಿತ್ರದ ಎದುರು ಪಿಂಡ ಅರ್ಪಿಸಿ ಪೂಜೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಐದು ಮಂದಿ ಪುರೋಹಿತರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬ್ರಿಜೇಶ್‌ನನ್ನು ಬಂಧಿಸಲಾಗಿದೆ. ಬ್ರಿಜೇಶ್ ತಮ್ಮ ಬಳಿ ಸುಳ್ಳು ಹೇಳಿ ಪೂಜೆಗೆ ಗಂಗಾ ತೀರಕ್ಕೆ ಕರೆತಂದಿದ್ದಾನೆ ಎಂದು ಪೂಜೆಯಲ್ಲಿ ಭಾಗವಹಿಸಿದ ಪುರೋಹಿತರು ಹೇಳಿದ್ದಾರೆ. ಗಂಗಾ ಪೂಜೆ ನಡೆಸಲು ಬ್ರಿಜೇಶ್ ತಮ್ಮನ್ನು ಒತ್ತಾಯಪಡಿಸಿದ್ದಾನೆ ಎಂದು ಪುರೋಹಿತರು ಆರೋಪಿಸಿದ್ದಾರೆ. ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಪೊಲೀಸರು ಬ್ರಿಜೇಶ್‌ನನ್ನು ಬಂಧಿಸಿದ್ದಾರೆ. ಈ ಘಟನೆಯನ್ನು ಸುದ್ದಿ ಸಂಸ್ಥೆಯಾದ ಪಿಟಿಐ ವರದಿ ಮಾಡಿದೆ. ಯೋಗಿಯ ಚಿತ್ರದ ಮುಂದೆ ಪಿಂಡ ಇಡುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

- Advertisement -