‘ಯಡಿಯೂರಪ್ಪ ನಾಪತ್ತೆಯಾಗಿದ್ದಾರೆ’ – ಮುಖ್ಯಮಂತ್ರಿ ವಿರುದ್ಧ ಸದನದಲ್ಲಿ ಬಿಜೆಪಿ ಶಾಸಕನಿಂದಲೇ ವಾಗ್ದಾಳಿ !

Prasthutha: March 10, 2021

ಸ್ವಪಕ್ಷೀಯರ ವಿರುಧ್ದವೇ ಧ್ವನಿಯೆತ್ತುವಲ್ಲಿ ಸುದ್ದಿಯಾಗುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಂಚಮಸಾಲಿ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಇಂದು ಮತ್ತೊಮ್ಮೆ ಸಿಎಂ ವಿರುಧ್ದವೇ ಗುಡುಗಿದ್ದಾರೆ. ಇಂದು ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಯತ್ನಾಳ್, “ನಮ್ಮ ಸಮಾಜದ ಹೆಸರಿನಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆದರೆ ಇಂದು ಈ ಸಮಾಜದ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ಈ ಸಮಾಜದ ಬಗ್ಗೆ ಪ್ರೀತಿ ಇದೆ” ಎಂದು ಸದನದಲ್ಲಿ ಹೇಳಿದ್ದಾರೆ.

ನಾಪತ್ತೆ ಹೇಳಿಕೆ , ಯತ್ನಾಳ್- ರೇಣುಕಾಚಾರ್ಯ ಜಟಾಪಟಿ !
ಇನ್ನು ಸಿಎಂ ನಾಪತ್ತೆಯಾಗಿದ್ದಾರೆ ಎಂದು ಹೇಳಿದ ಶಾಸಕ ಯತ್ನಾಳ್ ವಿರುಧ್ದ ವಿಧಾನಸೌಧದಲ್ಲಿಯೇ ಯತ್ನಾಳ್ ಹಾಗೂ ರೇಣುಕಾಚಾರ್ಯ ನಡುವೆ ಜಟಾಪಟಿ ನಡೆದಿದೆ. ಸಿಎಂ ಯಡಿಯೂರಪ್ಪ ನಾಪತ್ತೆಯಾಗಿಲ್ಲ , ಪಂಚಮಸಾಲಿ ಸಮುದಾಯಕ್ಕೆ ಅಪಾರವಾದ ಗೌರವವಿದೆ ಎನ್ನುತ್ತಾ ಯತ್ನಾಳ್ ಹೇಳಿಕೆಯ ವಿರುಧ್ದ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!