ಬದಲಾಯ್ತು ಫೇಸ್ ಬುಕ್ ಸಂಸ್ಥೆಯ ಹೆಸರು | ಹೊಸ ಹೆಸರೇನು ಗೊತ್ತೇ?

Prasthutha|

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಸಂಸ್ಥೆ ತನ್ನ ಹೆಸರನ್ನು “ಮೆಟಾ” ಎಂದು ಬದಲಾವಣೆ ಮಾಡಿಕೊಂಡಿದೆ
ಜನಪ್ರಿಯ ಜಾಲತಾಣ ಫೇಸ್ಬುಕ್ ಕಂಪನಿಗೆ ‘ಮೆಟಾವರ್ಸ್’ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಮಾಹಿತಿ ನೀಡಿದ್ದಾರೆ.

- Advertisement -

ಫೇಸ್ಬುಕ್ ಕಂಪನಿ ಇನ್ನುಮುಂದೆ ಮೆಟಾರವರ್ಸ್ ಎಂದು ಬದಲಾಗಲಿದೆ. ಕಂಪನಿಯ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್ 100 ಕೋಟಿ ಜನರನ್ನು ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿಕೊಡುವ ಜೊತೆಗೆ ಜನರ ಸಂವಹನ, ಉತ್ಪನ್ನಗಳಿಗೆ ಮಾರುಕಟ್ಟೆ, ವಿವಿಧ ವಿಷಯಗಳ ಕುರಿತ ರಚನೆಗೆ ಅವಕಾಶ ನೀಡಲಿದೆ ಎಂದು ಅವರು ತಿಳಿಸಿದ್ದಾರೆ. ಮತ್ತು ಮೆಟಾವರ್ಸ್‌ನಲ್ಲಿ, ನೀವು ಹ್ಯಾಂಗ್ ಔಟ್ ಮಾಡಲು, ಸ್ನೇಹಿತರೊಂದಿಗೆ ಆಟವಾಡಲು, ಕೆಲಸ ಮಾಡಲು, ರಚಿಸಲು ಮತ್ತು ಹೆಚ್ಚಿನದನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಮೆಟಾವರ್ಸ್ ಅಂದರೆ ಭವಿಷ್ಯತ್ ನ ಕಾನ್ಸೆಪ್ಟ್ ಹೊಂದಿದ ಸಂಸ್ಥೆಗಳ ಕಂಪನಿಯಾಗಿ ಅಭಿವೃದ್ಧಿಪಡಿಸುವ ಕಡೆಗೆ ಗಮನಹರಿಸುವ ನಿಟ್ಟಿನಲ್ಲಿ ತನ್ನ ಹೆಸರನ್ನು ‘ಮೆಟಾ’ ಎಂದು ಬದಲಾಯಿಸಿದೆ.

Join Whatsapp