ಹೊಸದಿಲ್ಲಿ: ಮಾಜಿ ಬಿಜೆಪಿ ನಾಯಕ ಬಾಬುಲ್ ಸುಪ್ರಿಯೋ ಅಧಿಕೃತವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ತೊರೆದಿದ್ದ ಸುಪ್ರಿಯೋ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸೇರಿದ್ದರು.
ಅಧಿಕೃತವಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ವತಃ ಸುಪ್ರಿಯೋ ನಿನ್ನೆ ಟ್ವಿಟರ್ ನಲ್ಲಿ ಘೋಷಿಸಿದ್ದರು. ಬಿಜೆಪಿಯ ಸದಸ್ಯನಾಗಿರದ ಕಾರಣ ತನಗೆ ಬಿಜೆಪಿಯಿಂದ ಗೆದ್ದಿರುವ ಲೋಕಸಭಾ ಸ್ಥಾನದ ಯಾವುದೇ ಪ್ರಯೋಜನಗಳ ಅಗತ್ಯವಿಲ್ಲ ಎಂದು ಅವರು ಟ್ವೀಟ್ ಮಾಡಿದ್ದರು.