ತೀರ್ಥ ಕುಡಿಯುವಾಗ ಮೂರ್ತಿ ನುಂಗಿದ ಭಕ್ತ; ಶಸ್ತ್ರ ಚಿಕಿತ್ಸೆಮೂಲಕ ವಿಗ್ರಹ ತೆಗೆದ ವೈದ್ಯ!

Prasthutha|

ಬೆಳಗಾವಿ: ವ್ಯಕ್ತಿಯೊಬ್ಬರು ತೀರ್ಥ ಸೇವನೆ ವೇಳೆ ಕೃಷ್ಣನ ಲೋಹದ ಮೂರ್ತಿಯನ್ನು ನುಂಗಿರುವ  ಘಟನೆ ಬೆಳಗಾವಿಯಲ್ಲಿ ನಡೆದಿದೆ.

- Advertisement -

ಪೂಜೆ ಮಾಡಿ ಅಂಗೈನಲ್ಲಿ ಕೃಷ್ಣ ನ ಮೂರ್ತಿ ಇಟ್ಟುಕೊಂಡಿದ್ದ 45 ರ್ಷದ  ವ್ಯಕ್ತಿ ಆಕಸ್ಮಿಕವಾಗಿ ತೀರ್ಥದ ಜೊತೆ ಮೂರ್ತಿಯನ್ನು ನುಂಗಿದ್ದಾರೆ. ಪ್ರತಿ ದಿನ  ಪೂಜೆ ಮಾಡಿದ ಬಳಿಕ ತೀರ್ಥ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿದ್ದ ಈ ವ್ಯಕ್ತಿ ಎಂದಿನಂತೆ ಪೂಜೆ ಮಾಡಿದ ಬಳಿಕ ತೀರ್ಥ ಸೇವಿಸುವಾಗ ಈ ಘಟನೆ ನಡೆದಿದೆ. ಬಳಿಕ ಆತನಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿದ್ದು, ಕೂಡಲೇ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದಾರೆ.

ವ್ಯಕ್ತಿಯನ್ನು ಪರಿಶೀಲಿಸಿದ ವೈದರು ಎಕ್ಸ್ ರೇ ಮಾಡಿಸಲು ಸೂಚಿಸಿದ್ದರು. ಎಕ್ಸ್ ರೇ ವರದಿಯಲ್ಲಿ ವಿಗ್ರಹ ಗಂಟಲಿನಲ್ಲಿ ಸಿಲುಕಿರುವುದು ಪತ್ತೆಯಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

ಎಂಡೋಸ್ಕೋಪ್ ಮಾಡಿರುವ ವೈದ್ಯರು ಮೂರ್ತಿಯ ಕಾಲು ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ. ನಂತರ ಇಎನ್‌ಟಿ ವಿಭಾಗದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಗಂಟಲಿನಲ್ಲಿ ಸಿಲುಕಿದ್ದ ವಿಗ್ರಹವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

Join Whatsapp