ದತ್ತಾತ್ರೇಯ ದೇವಸ್ಥಾನದಲ್ಲಿ ಅರ್ಚಕರಿಂದ ಹೈಟೆಕ್ ಲೂಟಿ : ಕೋಟ್ಯಂತರ ಹಣ ಕೊಳ್ಳೆ ಹೊಡೆದ ಪೂಜಾರಿಗಳಿಂದ ಭಕ್ತರಿಗೆ ಪಂಗನಾಮ

Prasthutha|

ಕಲಬುರಗಿ: ಜಿಲ್ಲೆಯ ದತ್ತಾತ್ರೇಯ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಗೆ ಬದಲಾಗಿ ಏಳೆಂಟು ನಕಲಿ ವೆಬ್ ಸೈಟ್ ಕ್ರಿಯೇಟ್ ಮಾಡಿದ ಅರ್ಚಕರು ಆ ಮೂಲಕ ಭಕ್ತರಿಂದ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ದರ್ಶನ, ವಿಶೇಷ ಪೂಜೆ, ಅರ್ಚನೆ ಸೇರಿದ ದೇವಸ್ಥಾನದ ಎಲ್ಲಾ ಸೇವೆಗಳನ್ನು ಆನ್ ಲೈನ್ ನಲ್ಲಿ ಮೂಲಕ ಒದಗಿಸುವುದಾಗಿ ಪೂಜಾರಿಗಳು ಭಕ್ತರನ್ನು ನಂಬಿಸಿದ್ದಾರೆ. ಮತ್ತು ನಕಲಿ ವೆಬ್ ಸೈಟ್ ಮೂಲಕ ಭಕ್ತರಿಂದ ಬಂದ ಹಣವನ್ನು ತಮ್ಮ ವೈಯಕ್ತಿಕ ಖಾತೆಗೆ ವರ್ಗಾಯಿಸಿದ್ದಾರೆ.

ಇದೂ ಅಲ್ಲದೆ ದೇವಸ್ಥಾನಕ್ಕೆ ಬರುವಂತಹ ದಾನವನ್ನು ಅರ್ಚಕರು ಕೊಳ್ಳೆ ಹೊಡೆದಿದ್ದು ಆ ಮೂಲಕ ಸರಕಾರದ ಬೊಕ್ಕಸಕ್ಕೂ ವಂಚನೆ ಮಾಡಿದ್ದಾರೆ. ಜೊತೆಗೆ ಹುಂಡಿ ಹಣ ಎಣಿಕೆ ಸಂದರ್ಭದಲ್ಲೂ‌ ಸಿಸಿ ಕ್ಯಾಮಾರವನ್ನು ಮುಚ್ಚಿ ಅಲ್ಲೂ ಮೋಸ ಮಾಡಲಾಗಿದೆ ಎಂದು ತಿಳಿದು ಬಂದಿದೆ.

- Advertisement -

ಈ ಹೈಟೆಕ್ ಲೂಟಿಯನ್ನು ಸಾರ್ವಜನಿಕರ ದೂರಿನ ಆಧಾರದಲ್ಲಿ ಕಲಬುರುಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಬಯಲಿಗೆಳೆದಿದ್ದು ಅರ್ಚಕರಿಂದ ಕೋಟ್ಯಂತರ ಹಣ ವಂಚನೆಯಾಗಿರುವುದು ತಿಳಿದು ಬಂದಿದೆ.

Join Whatsapp