ಹೆಚ್ಚಿದ ಕೋವಿಡ್ ಸೋಂಕು | ಚೀನಾದಲ್ಲಿ ಮತ್ತೆ ಲಾಕ್ ಡೌನ್

Prasthutha|

ಬೀಜಿಂಗ್ : ವಿಶ್ವದಾದ್ಯಂತ ವ್ಯಾಪಕಗೊಂಡಿದ್ದ ಮಾರಣಾಂತಿಕ ಕೋವಿಡ್ ಸೋಂಕು ಮತ್ತೆ ಮರುಕಳಿಸುವ ಭೀತಿ ಬಂದೊದಗಿದೆ. ಕೋವಿಡ್ ಹೆಚ್ಚಳಗೊಂಡ ಪರಿಣಾಮ ಚೀನಾದಲ್ಲಿ ಲಾಕ್ ಡೌನ್ ಮಾಡಲಾಗಿದೆ.

- Advertisement -

ಕೋವಿಡ್ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾದಲ್ಲಿರುವ ವಿಶ್ವದ ಅತಿದೊಡ್ಡ ಐಫೋನ್ ಫ್ಯಾಕ್ಟರಿಯ ಸುತ್ತಲಿನ ಪ್ರದೇಶದ 6 ಲಕ್ಷ ಜನರ ಮೇಲೆ ಚೀನಾದ ಅಧಿಕಾರಿಗಳು ಲಾಕ್‌ಡೌನ್ ಹೇರಿದ್ದಾರೆ.

ಕೊರೋನಾ ಟೆಸ್ಟ್ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯುವವರನ್ನು ಹೊರತುಪಡಿಸಿ ಉಳಿದವರಾರೂ ತಮ್ಮ ನಿವಾಸಗಳಿಂದ ಹೊರಬರಬಾರದು ಎಂದು ಅಲ್ಲಿನ ಕೋವಿಡ್ ತಡೆಗಟ್ಟುವ ನಿಯಂತ್ರಣಾಧಿಕಾರಿಗಳು ಎಚ್ಚರಿಸಿದ್ದಾರೆ.

- Advertisement -

ಝೆಂಗ್‌ಝೌ ಎಂಬ ಘಟಕವೊಂದರಲ್ಲಿ 2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆಯೂ ನಿಗಾ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

Join Whatsapp