ರಾಜ್ಯದ ಬಿಜೆಪಿ ಸರಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ: ಎಂ.ಕೋಟೆ ಶಿವಣ್ಣ

Prasthutha|

ಮೈಸೂರು: ಬಿಜೆಪಿ ನೇತ್ರತ್ವದ ರಾಜ್ಯ ಸರ್ಕಾರ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ ಕೋಟೆ ಶಿವಣ್ಣ ಹೇಳಿದ್ದಾರೆ.

- Advertisement -

ನಗರದ ಸರಸ್ವತಿಪುರಂ ಬಳಿ ಇರುವ ಕುದುರೆಮಾಳ ಶಾಲೆಗೆ ಭೇಟಿ ನೀಡಿ ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿ, ಮಾತನಾಡಿದ ಶಿವಣ್ಣ, ಪೌರ ಕಾರ್ಮಿಕರ ಮಕ್ಕಳು ತಮ್ಮ ಪೋಷಕರ ವೃತ್ತಿಯನ್ನೇ ಅನುಸರಿಸದೆ ಅದರಿಂದ ಹೊರಬರುವಂತೆ ಮಾಡಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ಹಿನ್ನೆಲೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ಶಾಲೆಯ ಕೊಠಡಿ, ಶೌಚಾಲಯ, ಕಟ್ಟಡವನ್ನ ವೀಕ್ಷಣೆ ಮಾಡಿದ ಅವರು, ಸರ್ಕಾರ ಇಂಥ ಮಕ್ಕಳ ಮತ್ತು ಈ ತಳ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನ ಕೈಗೊಂಡಿದೆ. ಅದರಲ್ಲೂ ಬೊಮ್ಮಾಯಿಯವರ ಸರ್ಕಾರ ಬಹಳ ಮುತುವರ್ಜಿ ವಹಿಸುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

- Advertisement -

ಪೌರ ಕಾರ್ಮಿಕರ ಜೊತೆ ಸಮಾಲೋಚನೆ ನಡೆಸಿದ ಅಧ್ಯಕ್ಷರು ಸರ್ಕಾರಿ ಸೌಲಭ್ಯ ಸವಲತ್ತುಗಳು ತಲುಪುತ್ತಿದೆಯಾ ಎಂದು ಅವರ ಸಮಸ್ಯೆಗಳನ್ನು ಆಲಿಸಿದ್ದು, ಪೌರ ಕಾರ್ಮಿಕರ ಶಾಲೆಯ ಅವ್ಯವಸ್ಥೆ ಕಂಡು ಅಸಮಧಾನ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತರಾದ ರೂಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಸಂವಾದ ವೇಳೆ ಉಪಸ್ಥಿತರಿದ್ದರು.

Join Whatsapp