November 26, 2020

2 ಕಾರುಗಳಿಗೆ ಢಿಕ್ಕಿ ಹೊಡೆದು ಹೋಟೆಲ್ ಗೆ ನುಗ್ಗಿದ ಕಂಟೈನರ್ ಲಾರಿ | ನಾಲ್ವರು ಸಾವು

ಚಿಕ್ಕಬಳ್ಳಾಪುರ : ವೇಗವಾಗಿ ಬಂದ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ, ಎರಡು ಕಾರುಗಳಿಗೆ ಢಿಕ್ಕಿ ಹೊಡೆದು ಬಳಿಕ ಹೋಟೆಲ್ ಗೆ ನುಗ್ಗಿದ ಘಟನೆ ನಡೆದಿದೆ. ಘಟನೆಯಲ್ಲಿ ಹೊಟೇಲ್ ನಲ್ಲಿ ಚಹಾ ಕುಡಿಯುತ್ತಿದ್ದ ಮೂವರು ಮತ್ತು ಕಾರಿನಲ್ಲಿದ್ದ ಒಬ್ಬರು ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಹೊರ ವಯಲದ ಚದಲಪುರ ಕ್ರಾಸ್ ಬಳಿ ಘಟನೆ ಸಂಭವಿಸಿದೆ. ತಾಲೂಕಿನ ಗವಿಗಾನಹಳ್ಳಿಯ ಗಾರೆ ಯಮುನಾಚಾರಿ, ವೆಂಕಟೇಶಪ್ಪ, ನಿತೀಶ್ ಗೌಡ, ತಮಿಳುನಾಡಿನ ಕಲಂಜಲ್ ಮೃತಪಟ್ಟವರು. ಕಾರಿನಲ್ಲಿದ್ದ ಯಮುನಾಚಾರಿ ಎಂಬವರೂ ಮೃತಪಟ್ಟಿದ್ದಾರೆ.

ಬಾಗೇಪಲ್ಲಿಯಿಂದ ಬಂದ ಕಾರು ಚಿಕ್ಕಬಳ್ಳಾಪುರ ಕಡೆಗೆ ತಿರುವು ಪಡೆದುಕೊಳ್ಳುವಾಗ ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಕಂಟೈನರ್ ಲಾರಿ ಎರಡು ಕಾರುಗಳಿಗೆ ಢಿಕ್ಕಿ ಹೊಡೆದು, ಹೋಟೆಲ್ ಗೆ ನುಗ್ಗಿದೆ.

ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ನಂದಿಗಿರಿಧಾಮ ಠಾಣೆಯಲ್ಲಿ ದೂರು ದಾಖಲಾಗಿದೆ.

ಟಾಪ್ ಸುದ್ದಿಗಳು

ವಿಶೇಷ ವರದಿ