ಫುಟ್ಬಾಲ್ ದಿಗ್ಗಜ ಡಿಗೊ ಮರಡೋನ ನಿಧನಕ್ಕೆ ತೆಂಡೂಲ್ಕರ್, ಕೈಫ್, ಪಠಾಣ್ ಸಂತಾಪ

Prasthutha|

ನವದೆಹಲಿ : ಫುಟ್ಬಾಲ್ ದಿಗ್ಗಜ ಡಿಗೊ ಮರಡೋನ ಅವರ ನಿಧನಕ್ಕೆ ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಕೈಫ್ ಮತ್ತು ಇರ್ಫಾನ್ ಪಠಾಣ್ ಸಂತಾಪ ಸೂಚಿಸಿದ್ದಾರೆ. ಅರ್ಜೆಂಟೀನಾ ತಂಡದ ಪರವಾಗಿ ಆಡುತ್ತಿದ್ದ ಮರಡೋನ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸಂತಾಪ ಸೂಚಿಸಿದ್ದಾರೆ. “ಫೂಟ್ಬಾಲ್ ಮತ್ತು ಕ್ರೀಡಾ ಜಗತ್ತು ಇಂದು ಓರ್ವ ಶ್ರೇಷ್ಠ ಆಟಗಾರನನ್ನು ಕಳೆದುಕೊಂಡಿದೆ. ಡಿಗೊ ಮರಡೋನ ಅವರ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.  

- Advertisement -

“ಅವರ ಆಟದ ಅಸಂಖ್ಯಾತ ಅಭಿಮಾನಿಗಳಲ್ಲಿ ನಾನೂ ಒಬ್ಬ. ಇದು ಆಘಾತವನ್ನುಂಟು ಮಾಡಿದೆ! ಜಗತ್ತಿನಾದ್ಯಂತ ಇರುವ ಡಿಗೊ ಮರಡೋನ ಅವರ ಅಭಿಮಾನಿಗಳಿಗೆ ನನ್ನ ಸಂತಾಪವಿದೆ. ದಂತಕಥೆಯ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ಕೈಫ್ ಟ್ವೀಟ್ ಮಾಡಿದ್ದಾರೆ.

 “ನಾನು ನನ್ನ ಬಾಲ್ಯದಲ್ಲಿ ಫೂಟ್ಬಾಲ್ ಬಗ್ಗೆ ಹೆಚ್ಚು ಆಸಕ್ತನಾಗಿರಲಿಲ್ಲ, ಆದರೆ ಖಚಿತವಾಗಿ ಮರಡೋನ ಯಾರೆಂದು ಗೊತ್ತಿತ್ತು. ದಂತಕಥೆಯ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.

- Advertisement -