ಗೋವಾದಲ್ಲಿ 8 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ

Prasthutha|

ಪಣಜಿ: ಗೋವಾದ ಎಂಟು ಕಾಂಗ್ರೆಸ್ ಶಾಸಕರು ಬುಧವಾರ ಆಡಳಿತರೂಢ ಬಿಜೆಪಿಗೆ ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ದಿಗಂಬರ್ ಕಾಮತ್, ಮೈಕಲ್ ಲೋಬೋ, ದೇಲಿಲಾ ಲೋಬೋ, ರಾಜೇಶ್ ಫಾಲ್ದೇಸಾಯಿ, ಕೇದಾರ್ ನಾಯ್ಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೋ ಸಿಕ್ವೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಎಂಬವರು ಬಿಜೆಪಿ ಸೇರಿದ ಪ್ರಮುಖರಾಗಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್’ನ ಮಾಜಿ ಶಾಸಕ ಮೈಕಲ್ ಲೋಬೋ, ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಕೈ ಬಲಪಡಿಸಲು ನಾವು ಬಿಜೆಪಿ ಸೇರಿದ್ದೇವೆ. ಕಾಂಗ್ರೆಸ್ ಛೋಡೋ, ಬಿಜೆಪಿ ಕೋ ಜೋಡೋ ಎಂದು ತಿಳಿಸಿದ್ದಾರೆ.

- Advertisement -

ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ಬಿಜೆಪಿ ಸೇರಿರುವುದು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ ಮಾಡಿದೆ.

ಒಟ್ಟು 40 ಶಾಸಕರ ಸಂಖ್ಯಾಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 11 ಶಾಸಕರನ್ನು ಹೊಂದಿದ್ದು, ಬಿಜೆಪಿ 20 ಶಾಸಕರನ್ನು ಹೊಂದಿದೆ. 8 ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯೊಂದಿಗೆ ಗೋವಾ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ಕೇವಲ 3 ಶಾಸಕರು ಬಾಕಿ ಉಳಿದಂತಾಗಿದೆ.

Join Whatsapp