ರಸ್ತೆ ಬದಿ ಮಲಗಿದ್ದವರ ಬರ್ಬರ ಹತ್ಯೆ ಮಾಡುತ್ತಿದ್ದ ʻನಟೋರಿಯಸ್‌ʼ ಕೊಲೆಗಾರ ಅರೆಸ್ಟ್

Prasthutha|

ಬೆಂಗಳೂರು: ರಸ್ತೆ ಬದಿ ಮಲಗಿದ್ದವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ನಟೋರಿಯಸ್‌ ಕೊಲೆಗಾರ ಗಿರೀಶ್‌ ಎಂಬಾತನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.

- Advertisement -

ಬೆಂಗಳೂರಿನ ಬನಶಂಕರಿ ನಿವಾಸಿಯಾಗಿರುವ ಗಿರೀಶ್‌, ಒಂದೇ ವಾರದಲ್ಲಿ ಎರಡು ಕೊಲೆಗಳನ್ನು ಮಾಡಿದ್ದನು.

ಕುಡಿದು ಬಂದು ರಸ್ತೆ ಬದಿ ಮಲಗಿದ್ದವರ ಕೊಲೆ ಮಾಡುತ್ತಿದ್ದ ಗಿರೀಶ್‌ ಮೇ12 ರಂದು ಜಯನಗರ 9ನೇ ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದನು. ಬಳಿಕ ಮೇ18 ರಂದು ಸಿಟಿ ಮಾರ್ಕೆಟ್‌ ಹಿಂಭಾಗದಲ್ಲಿ ಮಲಗಿದ್ದ ಮತ್ತೊಬ್ಬ ವ್ಯಕ್ತಿಯನ್ನು ಗಿರೀಶ್‌ ಕೊಲೆ ಮಾಡಿದ್ದನು. ಘಟನೆ ಸಂಬಂಧ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- Advertisement -

ತನಿಖೆ ಕೈಗೊಂಡ ಪೊಲೀಸರು ಸದ್ಯ ನಟೋರಿಯಸ್‌ ಕೊಲೆಗಾರ ಗಿರೀಶ್‌ ನನ್ನು ಬಂಧಿಸಿದ್ದಾರೆ. ಮೋಜಿಗಾಗಿ ಕೊಲೆ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.

Join Whatsapp