ಹನುಮ ಮೆರವಣಿಗೆಯಲ್ಲಿ ಚಾಕು ಹಿಡಿದು ನೃತ್ಯ: ಉದ್ವಿಗ್ನ ವಾತಾವರಣ

Prasthutha|

ತೆಲಂಗಾಣ: ಕರೀಂ ನಗರದಲ್ಲಿ ರಾತ್ರಿ ಹನುಮ ಭಕ್ತರು ನಡೆಸುತ್ತಿದ್ದ ಮೆರವಣಿಗೆ ಜಿಲ್ಲಾಸ್ಪತ್ರೆ ಬಳಿಯ ಮಂಚೇರಿಯಲ್‌ ಚೌಕ್‌ ತಲುಪಿದಾಗ ಯುವಕನೊಬ್ಬ ಕೈಯಲ್ಲಿ ಡ್ಯಾನ್ಸ್ ಮಾಡಲು ಮುಂದಾದ ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹನುಮ ರ್ಯಾಲಿ ಸಂದರ್ಭದಲ್ಲಿ ಕೈಯಲ್ಲಿ ಚಾಕು ಹಿಡಿದು ನೃತ್ಯ ಮಾಡಿದ ವ್ಯಕ್ತಿಯನ್ನು ಜಯದೇವ್‌ ಸಿಂಗ್‌ ಎಂದು ಗುರುತಿಸಲಾಗಿದೆ.

- Advertisement -

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಯುವಕನನ್ನು ಠಾಣೆಗೆ ಕರೆದೊಯ್ಯಲು ಪೊಲೀಸರು ಮುಂದಾದಾಗ ಅವರನ್ನು ಭಕ್ತರು ತಡೆದಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ಮತ್ತು ಭಕ್ತರ ನಡುವೆ ವಾಗ್ವಾದ ನಡೆಯಿತು. ಆದರೂ ಪೊಲೀಸರು ಯುವಕರನ್ನು ಠಾಣೆಗೆ ಕರೆದೊಯ್ಯಲು ಪ್ರಯತ್ನಿಸಿದಾಗ ಭಕ್ತರು ಪೊಲೀಸ್‌‍ ವಾಹನದ ಕಿಟಕಿ ಗಾಜುಗಳಿಗೆ ದಾಖಲಿಸಿಕೊಂಡಿದ್ದಾರೆ.

- Advertisement -

ಪೊಲೀಸರ ಕ್ರಮದಿಂದ ಆಕ್ರೋಶಗೊಂಡ ಭಕ್ತರು ಮಂಚೇರಿಯಲ್‌ ಚೌಕ್‌ನಲ್ಲಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಧರಣಿ ನಿರತ ಜನರನ್ನು ಸಮಾಧಾನಪಡಿಸಲು ಮುಂದಾದರೂ ಆ ಸಂದರ್ಭದಲ್ಲಿ ಕೆಲವರು ಭಕ್ತರ ಪ್ರತಿಭಟನೆಗೆ ಬೆಂಬಲ ನೀಡಿದಾಗ ಪೊಲೀಸರು ಅವರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಆಕ್ಷೇಪಿಸಿದ್ದು, ಘಟನಾ ಸ್ಥಳ ಬೂದಿ ಮುಚ್ಚಿದ ಕೆಂಡದಂತ ವಾತಾವರಣದಲ್ಲಿದೆ.

ಈ ವಿಷಯ ತಿಳಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮೂರು ಪಟ್ಟಣ ಪೊಲೀಸ್‌‍ ಠಾಣೆಗೆ ದೊಡ್ಡ ಪ್ರಮಾಣದಲ್ಲಿ ಜಮಾಯಿಸಿ, ಪೊಲೀಸರು ಬಂಧಿಸಿರುವ ಹನುಮಂತ ಭಕ್ತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಪೊಲೀಸ್‌‍ ಅಧಿಕಾರಿಗಳು ಭಾರೀ ಬಂದೋಬಸ್ತ್‌ ಮಾಡಿ ಲಘು ಲಾಠಿ ಪ್ರಹಾರ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಕೆಲವು ಬಿಜೆಪಿ ಕಾರ್ಯಕರ್ತರು ಮತ್ತು ಭಕ್ತರನ್ನು ಪಿಟಿಸಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಪೊಲೀಸ್‌‍ ವಾಹನಕ್ಕೆ ಹಾನಿ ಮಾಡಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೆಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Join Whatsapp