ಕಾಫಿನಾಡ ಜನರಿಗೆ ಮಳೆ ಜೊತೆ ಕಾಡಾನೆ ಕಾಟ

Prasthutha|

ಚಿಕ್ಕಮಗಳೂರು: ಕಾಫಿನಾಡ ಜನರಿಗೆ ಮಳೆ ಜೊತೆ ಕಾಡಾನೆ ಕಾಟ ಎದುರಾಗಿದೆ. ಕಾಡಾನೆಗಳ ದಾಂಧಲೆಗೆ ಒಂದು ಎಕರೆ ಕಾಫಿ ತೋಟ ನಾಶವಾದ ಘಟನೆ ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದಲ್ಲಿ ನಡೆದಿದೆ.

- Advertisement -

ಪುಷ್ಪ-ರಾಜು ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ದಾಂಧಲೆ ನಡೆಸಿರುವ ನಾಲ್ಕು ಕಾಡಾನೆಗಳ ಗುಂಪು ಕಾಫಿ ತೋಟ ನಾಶಮಾಡಿದೆ.

ಒಂದೆಡೆ ಮಳೆ ಕಾಟ, ಇನ್ನೊಂದೆಡೆ ಕಾಡಾನೆ ಕಾಟದಿಂದ ಸುಸ್ತಾಗಿರುವ ಸಂತ್ರಸ್ತರು ಸೂಕ್ತ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Join Whatsapp