ಛತ್ತೀಸ್ ಗಡದಲ್ಲಿ ಮೀಲಾದುನ್ನಬಿ ಸಿದ್ಧತೆ ವಿರೋಧಿಸಿ ಹಸಿರು ಧ್ವಜ ಕಿತ್ತು ಹಾಕಿದ ಹಿಂದುತ್ವ ಕಾರ್ಯಕರ್ತರು, ಗುಂಪು ಘರ್ಷಣೆ

Prasthutha|

ಹೈದಾರಾಬಾದ್: ಛತ್ತೀಸಗಡದಲ್ಲಿ ಕಾವರ್ಧಾ ಜಿಲ್ಲೆಯಲ್ಲಿ ಮಿಲಾದ್ ನಬಿ ಧ್ವಜ ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ವಿವಾದ ತಾರತಕ್ಕೇರಿದ್ದು, ಕೋಮು ಸಂಘರ್ಷ ಏರ್ಪಟ್ಟಿದೆ.

- Advertisement -

ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆ ಪೂರ್ವಭಾವಿಯಾಗಿ ನಗರವನ್ನು ಹಸಿರು ತೋರಣ ಮತ್ತು ಅರ್ಧಚಂದ್ರ ಧ್ವಜಗಳಿಂದ ಅಲಂಕರಿಸಲಾಗಿತ್ತು. ಈ ಕುರಿತು ಹಿಂದೂ ಸೇನೆ ಸದಸ್ಯರು ಅಕ್ಷೇಪ ವ್ಯಕ್ತಪಡಿಸಿದ್ದರು.

https://twitter.com/KashifArsalaan/status/1445100571313131529

ಮಾತ್ರವಲ್ಲ ಧ್ವಜಗಳನ್ನು ಕಿತ್ತು ಹಾಕಿ, ಹಸಿರು ತೋರಣಗಳನ್ನು ಧ್ವಂಸ ಮಾಡಿದ್ದರು. ಹಿಂದುತ್ವ ಸಂಘಟನೆಯ ಈ ನಡೆಯು ಮುಸ್ಲಿಮರ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಈ ಸಂಬಂಧ ಎರಡೂ ಕೋಮಿನವರು ಪರಸ್ಪರ ಹೊಡೆದಾಡಿಕೊಂಡಿದ್ದು, ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

- Advertisement -

ಘಟನೆಯನ್ನು ಹತೋಟಿಗೆ ತರುವ ಸಲುವಾಗಿ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಅನ್ನು ಮಾಡಲಾಗಿದೆ. ಮಾತ್ರವಲ್ಲ ಜಿಲ್ಲಾಡಳಿತ, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸರು ಪರಿಸ್ಥಿತಿಯ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.
ಪರಿಸ್ಥಿತಿಯ ನಿಯಂತ್ರಣಕ್ಕೆ ತರುವ ಸಲುವಾಗಿ ಸೆಕ್ಷನ್ 144 ಜಾರಿಗೊಳಿಸಿ ನಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ರಮೇಶ್ ಶರ್ಮಾ ತಿಳಿಸಿದ್ದಾರೆ.

https://twitter.com/KashifArsalaan/status/1445121019102908435
Join Whatsapp