ಚಲಿಸುತ್ತಿದ್ದ ಬಸ್ ನ ಮುಂಭಾಗದ ಗ್ಲಾಸ್ ಪೀಸ್..ಪೀಸ್..! ಕಾರಣವೇನು ಗೊತ್ತಾ..!?

Prasthutha|

ಕಣ್ಣೂರು: ಅತ್ಯಂತ ಅಪರೂಪದ ಘಟನೆಯೊಂದರಲ್ಲಿ ಚಲಿಸುತ್ತಿರುವ ಬಸ್ ನ ಮುಂಭಾಗದ ಗಾಜು ಇದ್ದಕ್ಕಿದ್ದಂತೆ ಪೀಸ್ ಪೀಸ್ ಆಗಿದೆ. ಡ್ರೈವರ್ ಬಸ್ ನಿಲ್ಲಿಸಿ ಸುತ್ತಮುತ್ತಲೂ ಹುಡುಕಿದ್ದಾನೆ. ಬಳಿಕ ಕಾರಣ ಗೊತ್ತಾಗಿ ದಂಗಾಗಿದ್ದಾನೆ.
ಕೇರಳದ ಕಣ್ಣೂರಿನ ಇರಿಟ್ಟಿ ಹಾಗೂ ನೆಡುಂಪೊಯಿಲ್ ನಡುವೆ ಪ್ರತಿನಿತ್ಯ ಸರ್ವೀಸ್ ನಡೆಸುತ್ತಿದ್ದ ಸೇಂಟ್ ಜೂಡ್ ಹೆಸರಿನ ಖಾಸಗಿ ಬಸ್ ನ ಮೇಲೆ ಮಂಗಗಳು ಗುಂಪು ದಾಳಿ ನಡೆಸಿದ್ದು, ತೆಂಗಿನ ಮರದಿಂದ ಎಳೆನೀರು ಎಸೆದ ಪರಿಣಾಮ ಮುಂಭಾಗದ ಗಾಜು ಸಂಪೂರ್ಣ ಹಾನಿಯಾಗಿದೆ.

- Advertisement -


ಬಸ್ ಚಲಿಸುತ್ತಿರುವಾಗಲೇ ಘಟನೆ ನಡೆದಿದ್ದು, ಗಾಜು ಪುಡಿಯಾಗಿ ಬಸ್ ಡ್ರೈವರ್ ಹಾಗೂ ಇಬ್ಬರು ಪ್ರಯಾಣಿಕರ ಮೇಲೆ ಬಿದ್ದ ಪರಿಣಾಮ ಮೂವರಿಗೂ ಗಾಯಗಳಾಗಿವೆ. ಘಟನೆಯಿಂದಾಗಿ ಈ ರೂಟ್ ನಲ್ಲಿ ಸಂಚರಿಸುವ ಏಕೈಕ ಬಸ್ ಸರ್ವೀಸ್ ಒಂದೂವರೆ ದಿನಗಳವರೆಗೆ ಸ್ಥಗಿತಗೊಂಡಿದೆ. ಮುಂಭಾಗದ ಗ್ಲಾಸ್ ಬದಲಾಯಿಸಲು ಮಾಲೀಕರಿಗೆ 17 ಸಾವಿರ ರುಪಾಯಿ ಖರ್ಚಾಗಿದೆ. ಆದರೆ ಅರಣ್ಯ ಇಲಾಖೆಯು ಈ ಬಗ್ಗೆ ಮೌನ ವಹಿಸಿದ್ದು ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಕೈತೊಳೆದುಕೊಂಡಿದೆ.


ಮಂಗಗಳ ನಿರಂತರ ಹಾವಳಿಯಿಂದಾಗಿ ಕಣ್ಣೂರಿನ ಇರಿಟ್ಟಿ ಹಾಗೂ ನೆಡುಂಪೊಯಿಲ್ ನಡುವೆ ಬಸ್ ಓಡಿಸಲು ಯಾವುದೇ ಬಸ್ ಮಾಲೀಕರು ಮುಂದಾಗುತ್ತಿಲ್ಲ. ಇದೀಗ ಸರ್ವೀಸ್ ನಡೆಸುತ್ತಿದ್ದ ಏಕೈಕ ಖಾಸಗಿ ಬಸ್ ಮೇಲೂ ಮಂಗಗಳು ದಾಳಿ ನಡೆಸಿದ ಪರಿಣಾಮ ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ಬಸ್ ಸಂಚಾರ ಮೊಟಕುಗೊಳ್ಳುವ ಭೀತಿ ಎದುರಾಗಿದೆ.

- Advertisement -



Join Whatsapp