ಬಿಜೆಪಿ ಬರ ಅಧ್ಯಯನ: ಪರಸ್ಪರ ಕೈ ಮಿಲಾಯಿಸಿಕೊಂಡ ನಾಯಕರು

Prasthutha|

ರಾಮನಗರ: ರಾಜ್ಯದಲ್ಲಿ ಬರಗಾಲ ಶುರುವಾಗಿದ್ದು, ಬಿಜೆಪಿಯಿಂದ ಬರಗಾಲ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ಆದರೆ ಬರಗಾಲ ಅಧ್ಯಯನದಲ್ಲಿರುವಾಗಲೇ ಬಿಜೆಪಿ ನಾಯಕರು ಪರಸ್ಪರ ಕೈ ಮಿಲಾಯಿಸಿಕೊಂಡ ಘಟನೆ ರಾಮನಗರದಲ್ಲಿ ನಡೆದಿದೆ.

- Advertisement -

ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಬರ ಅಧ್ಯಯನ ಪ್ರವಾಸ ವೇಳೆ ಬಿಜೆಪಿ ನಾಯಕರು ಪರಸ್ಪರ ಕೈ ಮಿಲಾಯಿಸಿದ್ದಾರೆ. ಬಿಜೆಪಿ ಎಂಎಲ್​ಸಿ ಆ. ದೇವೇಗೌಡ, ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಜಯರಾಂ ನಡುವೆ ಜಗಳ ತಾರಕಕ್ಕೇರಿ ಬೀದಿಯಲ್ಲೇ ಕೈ ಮಿಲಾಯಿಸಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಜಗಳ ಬಿಡಿಸಿದ್ದಾರೆ. ಬಿಜೆಪಿ ನಾಯಕರು ರೈತರ ಸಂಕಷ್ಟ ಪರಿಹಾರದ ನಡುವೆ ತಮ್ಮ ವೈಮನಸ್ಸನ್ನು ಬೀದಿಯಲ್ಲಿ ತೆರೆದಿಟ್ಟಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೆಲ ದಿನಗಳ ಹಿಂದೆ ಬರ ಅಧ್ಯಯನ ಪ್ರವಾಸ ಕೈಗೊಳ್ಳುವಂತೆ ಬಿಜೆಪಿ ನಾಯಕರಿಗೆ ಸೂಚಿಸಿದ್ದರು. ಈ ಸೂಚನೆ ಬೆನ್ನಲ್ಲೇ ಬರ ಅಧ್ಯಯನ ಪ್ರವಾಸವನ್ನು ಬಿಜೆಪಿ ನಾಯಕರು ಕೈಗೊಂಡಿದ್ದಾರೆ. ಇದರ ನಡುವೆ ಇಂತಹ ಕೈಕೈ ಮಿಲಾಯಿಸಿಕೊಳ್ಳುವಂತ ಜಗಳ ನಡೆದಿದ್ದು, ಟೀಕೆಗೆ ಕಾತಣವಾಗಿದೆ.

Join Whatsapp