ಬಿಜೆಪಿ ಹೈಕಮಾಂಡ್ ಕರೆಸಿ ಅವಮಾನಿಸಿ ಕಳಿಸಿದ್ದಕ್ಕೆ ಸದಾನಂದಗೌಡ ರಾಜಕೀಯ ನಿವೃತ್ತಿ: ಕಾಂಗ್ರೆಸ್

Prasthutha|

ಮಾಜಿ ಸಿಎಂ ಸದಾನಂದ ಗೌಡ ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದೆ. ಬಿಜೆಪಿ ಹೈಕಮಾಂಡ್ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿದೆ.

- Advertisement -

ಬಿಜೆಪಿ ಹೈಕಮಾಂಡ್ ನಾಯಕರು ಕರೆಸಿ ಅವಮಾನಿಸಿ ಕಳಿಸಿದ್ದರಿಂದ ನೊಂದ ಸದಾನಂದಗೌಡರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ. ಮುಂದುವರೆದು, ಸಂತೋಷ ಕೂಟ ದಾಳಕ್ಕೆ ಮುಂದಿನ ಲೋಕಸಭೆಯ ಟಿಕೆಟ್ ತಪ್ಪಿಸಿ ಸದಾನಂದ ಗೌಡರಿಗೆ ಅವಮಾನ ಮಾಡಿ ಕಳಿಸಲಾಗಿದೆ‌. ಎಲ್ಲಾ ತಲೆಗಳನ್ನೂ ಉರುಳಿಸಿ “ನಾಯಕತ್ವ ಮುಕ್ತ ಬಿಜೆಪಿ” ಮಾಡುವಲ್ಲಿ ಸಂತೋಷ ಕೂಟ ಯಶಸ್ವಿಯಾಗಿದೆ.’ ಎಂದು X ಮೂಲಕ ಹೇಳಿದೆ.

ಹಾಗೇ ಮತ್ತೊಂದು X ಮೂಲಕ ಬಿಜೆಪಿ ವಿರುದ್ಧ ಇನ್ನೊಂದು ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್, ‘ಅಧಿಕಾರದ ಹಪಹಪಿಯಲ್ಲಿರುವ ಬಿಜೆಪಿ ಪಕ್ಷಕ್ಕೆ ಸೆಳೆಯುವಾಗ ಜಾಮೂನು ಕೊಡ್ತಾರೆ, ನಂತರ ವಿಷ ಕೊಡುತ್ತಾರೆ.. ಇದನ್ನು ಬಿಜೆಪಿಯವರೇ ಹೇಳಿದ್ದು. ಈಗ ಬಿಜೆಪಿಯ ಜಾಮೂನು ತಿನ್ನುತ್ತಿರುವ ಕುಮಾರಸ್ವಾಮಿಯವರು ಮುಂದೆ ವಿಷ ತಿನ್ನಲು ತಯಾರಿರುವುದು ಒಳ್ಳೆಯದು. ಬಿಜೆಪಿಯವರು ಜಾಮೂನಿನ ಒಳಗೆ ವಿಷ ಬೆರೆಸಿರುತ್ತಾರೆ ಸತ್ಯ ವಲಸಿಗರಿಗೆ ಅರಿವಾಗಿದೆ. ಮುಂದೆ ಕುಮಾರಸ್ವಾಮಿಯವರಿಗೂ ಅರಿವಾಗಲಿದೆ.. ಅರಿವಾಗುವುದರೊಳಗೆ ಜೆಡಿಎಸ್ ಪ್ರಾಣ ಹೋಗಿರುತ್ತದೆ ಎಂದು ಆರೋಪಿಸಿದೆ.

- Advertisement -

ಹೀಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪ & ಪ್ರತ್ಯಾರೋಪಗಳು ಭರ್ಜರಿಯಾಗಿ ಮುಂದುವರಿದಿದೆ.

Join Whatsapp