ದುರಹಂಕಾರ ತೋರಿದಕ್ಕಾಗಿ ಭಗವಂತ ರಾಮ ಬಿಜೆಪಿಯನ್ನು 241ಕ್ಕೆ ನಿಲ್ಲಿಸಿದ್ದಾನೆ: ಆರೆಸ್ಸೆಸ್ ಮುಖಂಡ

Prasthutha|

ನವದೆಹಲಿ: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು, ನಿಜವಾದ ಕಾರ್ಯಕರ್ತರು ಎಂದೂ ಅಹಂಕಾರಿ ಆಗಿರುವುದಿಲ್ಲ. ಚುನಾವಣಾ ಪ್ರಚಾರದ ವೇಳೆ ಶಿಸ್ತು ಕಾಪಾಡಲಿಲ್ಲ. ಚುನಾವಣೆಯನ್ನು ನಾವು ಸ್ಪರ್ಧೆ ರೀತಿಯಲ್ಲಿ ನೋಡಬೇಕೇ ವಿನಃ ಯುದ್ಧದ ರೀತಿಯಲ್ಲಲ್ಲ ಎಂದು ಬಿಜೆಪಿಯ ಕಿವಿ ಹಿಂಡಿದ್ದ ಬೆನ್ನಿಗೆ ಮತ್ತೋರ್ವ ಆರೆಸ್ಸೆಸ್ ನಾಯಕ ಬಿಜೆಪಿ ವಿರುದ್ಧ ಕಿಡಿಗಾರಿದ್ದಾರೆ.

- Advertisement -

ಜೈಪುರ ಸಮೀಪದ ಕನೋಟಾದಲ್ಲಿ ಆಯೋಜಿಸಿದ್ದ ರಾಮರಥ ಅಯೋಧ್ಯೆ ಯಾತ್ರೆ ದರ್ಶನ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್, ಲೋಕಸಭಾ ಚುನಾವಣೆ ಫಲಿತಾಂಶ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ದುರಹಂಕಾರಿಯಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ದುರಹಂಕಾರಿಯಾದ್ದರಿಂದಲೇ ಅವರನ್ನು ಭಗವಾನ್ ರಾಮ ಅವರನ್ನು 241 ಸ್ಥಾನಕ್ಕೆ ನಿಲ್ಲಿಸಿದ್ದಾನೆ ಎಂದು ಬಿಜೆಪಿಗೆ ತಿವಿದಿದ್ದಾರೆ.

ಯಾರ ಹೆಸರನ್ನೂ ತೆಗೆದುಕೊಳ್ಳದೆ ಬಿಜೆಪಿ ವಿರುದ್ಧ ಕಿಡಿಗಾರಿರುವ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ, ಚುನಾವಣಾ ಫಲಿತಾಂಶಗಳು ಬಿಜೆಪಿಯವರ ಮನೋಭಾವವನ್ನು ಬಿಂಬಿಸುತ್ತವೆ. ಅವರು ಅಹಂಕಾರಿಯಾಗಿ ಬಿಟ್ಟಿದ್ದರು. ಬಿಜೆಪಿ ಪಕ್ಷ ಮೊದಲು ಭಕ್ತಿ ತೋರಿ ನಂತರ ದುರಹಂಕಾರಿಯಾಯಿತು. ಇದಕ್ಕಾಗಿಯೇ ಭಗವಂತ ರಾಮ ಅವರನ್ನು 241 ರಲ್ಲಿ ನಿಲ್ಲಿಸಿದ. ಆದರೆ ಅವರನ್ನು ದೊಡ್ಡ ಪಕ್ಷವನ್ನಾಗಿ ಮಾಡಿದರು. ಒಂದೆಡೆ ಶ್ರೀರಾಮನಲ್ಲಿ ನಂಬಿಕೆಯಿಲ್ಲದ ‘ಇಂಡಿಯಾ ಮೈತ್ರಿಕೂಟ’ದವರನ್ನು 234ಕ್ಕೆ ನಿಲ್ಲಿಸಲಾಯಿತು ಎಂದು ಅವರು ಹೇಳಿದ್ದಾರೆ.

- Advertisement -

ಅವರು ರಾಮನನ್ನು ಪೂಜಿಸಿದರು, ಆದರೆ ಕ್ರಮೇಣ ಅಹಂಕಾರಕ್ಕೆ ಬಂದರು. ಅತಿ ದೊಡ್ಡ ಪಕ್ಷವಾಯಿತು, ಆದರೆ ಸಿಗಬೇಕಾಗಿದ್ದ ಮತಗಳು ಅಹಂಕಾರದಿಂದ ಶ್ರೀರಾಮನಿಂದ ನಿಲ್ಲಿಸಲ್ಪಟ್ಟವು. ರಾಮನನ್ನು ವಿರೋಧಿಸಿದವರಿಗೆ ಅಧಿಕಾರ ಸಿಗುವುದಿಲ್ಲ ಎಂದೂ ಹೇಳಿದರು. ಎಲ್ಲರೂ ಒಟ್ಟಾಗಿ ಎರಡನೇ ಸ್ಥಾನದಲ್ಲಿ ಉಳಿದರು ಎಂದರು.

Join Whatsapp