ಮಂಗಳೂರು | ಬಸ್​ನಲ್ಲಿ ಕಳ್ಳರ ಕೈಚಳಕ: ಪರ್ಸ್, ನಗದು, ಫೋನ್ ಕಳವು ಮಾಡುತ್ತಾರೆ ಎಚ್ಚರಿಕೆ!

Prasthutha|

ಮಂಗಳೂರು: ಬಸ್​ನಲ್ಲಿ ಪ್ರಯಾಣಿಸುವವರೇ ಎಚ್ಚರದಿಂದ ಇರುವುದು ಒಳಿತು. ಸ್ವಲ್ಪ ಯಾಮಾರಿದರೂ ನಿಮ್ಮ ವಸ್ತುಗಳು ಮಾಯವಾಗುತ್ತವೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪರ್ಸ್, ಮೊಬೈಲ್ ಕಳಕೊಂಡಿರುವ ಮಾಹಿತಿ ಸಿಕ್ಕಿದೆ.

- Advertisement -

ಫರಂಗಿಪೇಟೆ, ಬಂಟ್ವಾಳ, ಪುತ್ತೂರು, ವಿಟ್ಲ ಭಾಗದಲ್ಲಿ ಬಸ್ ಒಳಗೆ ಪ್ರಯಾಣಿಕರ ಸೋಗಿನಲ್ಲಿ ಬಂದು ಜೇಬಿನಿಂದ ಹಣ, ಮೊಬೈಲ್ ತೆಗೆದು ತಮ್ಮ ಕೈಚಳಕ ತೋರಿಸಿದ್ದಾರೆ.

ಗುರುವಾರ ಸ್ಟೇಟ್ ಬ್ಯಾಂಕ್ ನಿಂದ ವಿಟ್ಲ‌ಕ್ಕೆ ಹೋಗುವ ಬಸ್ ನಲ್ಲಿ ಫರಂಗಿಪೇಟೆ ಬಳಿ 5000 ರೂ. ಇದ್ದ ಪರ್ಸ್ ಸಹಿತ ಹಲವು ದಾಖಲೆಗಳನ್ನು ಕಳ್ಳರು ಯುವಕನ ಜೇಬಿನಿಂದ ಎರಗಿಸಿದ್ದಾರೆ.

- Advertisement -

10 ದಿನದ ಮುಂಚೆ ಬಂಟ್ವಾಳದಿಂದ ಮಣಿಹಳ್ಳ ನಡುವೆ ಹೋಗುವ ಬಸ್ ನಲ್ಲಿ ವ್ಯಕ್ತಿಯೊಬ್ಬರ 10,000ರೂ. ಕಳ್ಳರ ಪಾಲಾಗಿದೆ.

ಇನ್ನು ಮಂಗಳೂರಿನ ಪಂಪ್‌ವೆಲ್ ಬಳಿ ಬಸ್ ನಲ್ಲಿ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನು ಕಳ್ಳರು ತೆಗೆದಿದ್ದಾರೆ. ಇಂತಹ ಘಟನೆಗಳು ದಿನಲೂ ನಡೆಯುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬಸ್ ಪ್ರಯಾಣಿಕರು ಈ ಕುರಿತು ಜಾಗರೂಕರಾಗಿರಬೇಕು ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಕಳ್ಳರಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Join Whatsapp