ಬಿಜೆಪಿಯನ್ನು ಕಿತ್ತೊಗೆಯಲು ಅಂಬೇಡ್ಕರ್-ಲೋಹಿಯಾ ಸಿದ್ಧಾಂತ ಒಂದಾಗಬೇಕು: ಅಖಿಲೇಶ್ ಯಾದವ್

Prasthutha|

ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಬಿ.ಆರ್ ಅಂಬೇಡ್ಕರ್ ಮತ್ತು ರಾಮ್ ಮನೋಹರ್ ಲೋಹಿಯಾ ಅವರ ಸಿದ್ಧಾಂತಗಳು ಒಂದಾಗಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.

- Advertisement -

2019ರ ಸಾರ್ವತ್ರಿಕ ಚುನಾವಣೆಯಲ್ಲಿ BSP ಜತೆಗಿನ ಮೈತ್ರಿಯು ಅಂಬೇಡ್ಕರ್ ಮತ್ತು ಲೋಹಿಯಾ ಅವರ ಸಿದ್ಧಾಂತವನ್ನು ಒಗ್ಗೂಡಿಸುವ ಪ್ರಯತ್ನವಾಗಿತ್ತು ಎಂದು ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ನಡೆದ ಜನಾದೇಶ ರ್ಯಾಲಿಯಲ್ಲಿ ಅವರು ಹೇಳಿದರು.

“ಅಂಬೇಡ್ಕರ್ ಮತ್ತು ಲೋಹಿಯಾ ಇಬ್ಬರೂ ಈ ದೇಶದಲ್ಲಿ ಬದಲಾವಣೆ ಬಯಸಿದ್ದರು. ಸಾವಿರಾರು ವರ್ಷಗಳಿಂದ ತಾರತಮ್ಯ ಮತ್ತು ಹತಾಶೆಯಿಂದ ಬದುಕಿದವರು ಅರ್ಹವಾದ ಗೌರವವನ್ನು ಪಡೆಯಬೇಕೆಂದು ಅವರು ಬಯಸಿದ್ದರು. ಅಂದು ಮೈತ್ರಿಗಾಗಿ ಸಮಾಜವಾದಿಗಳು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಅಂಬೇಡ್ಕರ್ ಮತ್ತು ಲೋಹಿಯಾ ಅವರ ಸಿದ್ಧಾಂತಗಳು ಒಗ್ಗೂಡಿದರೆ ಬಿಜೆಪಿ ಅಧಿಕಾರದಿಂದ ದೂರವಾಗಲಿದೆ” ಎಂದು ಹೇಳಿದರು.

- Advertisement -

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಲ್ಯಾಪ್‌ಟಾಪ್ ವಿತರಿಸುವ ಭರವಸೆ ನೀಡಿದ್ದಾರೆಯೇ ಹೊರತು ಅದನ್ನು ಈಡೇರಿಸಿಲ್ಲ ಎಂದು ಅಖಿಲೇಶ್ ಟೀಕಿಸಿದರು.
ಲ್ಯಾಪ್ಟಾಪ್ ಆಪರೇಟ್ ಮಾಡಲು ಗೊತ್ತಿಲ್ಲದ ಕಾರಣ ಆದಿತ್ಯನಾಥ್ ಲ್ಯಾಪ್ಟಾಪ್ಗಳನ್ನು ವಿತರಿಸಿಲ್ಲ ಎಂದು ಹೇಳಿದ ಯಾದವ್, ಮುಖ್ಯಮಂತ್ರಿ ಎಂದರೆ ಲ್ಯಾಪ್ಟಾಪ್ ಆಪರೇಟ್ ಮಾಡಲೂ ಕೂಡಾ ಗೊತ್ತಿಲ್ಲದಂತಾಗಬಾರದು ಎಂದು ಹೇಳಿದ್ದಾರೆ.

Join Whatsapp