‘ಬಿಜೆಪಿ’ ಬಂದ ಮೇಲೆ ಬೇಕಾದವರ ಆದಾಯ ವೃದ್ಧಿ; ‘ಕಾಂಗ್ರೆಸ್‌’ ಜನರ ಸಮಸ್ಯೆ ಮುಂದಿಟ್ಟು ಹೋರಾಟ ಮಾಡಲಿ: ಎಚ್‌.ಡಿ.ಕೆ

Prasthutha|

ರಾಮನಗರ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಜನಸಾಮಾನ್ಯರಿಗೆ ಬದುಕುವ ಶಕ್ತಿ ತುಂಬುವುದನ್ನು ಬಿಟ್ಟು ಬೇಕಾದವರ ಆದಾಯ ವೃದ್ಧಿಸುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

- Advertisement -

ಪತ್ರಕರ್ತರ ಜೊತೆ ಅವರು ಮಾತನಾಡಿದ  ಅವರು, ‘ಕಾಂಗ್ರೆಸ್‌ನವರು ಇ.ಡಿ. ವಿಚಾರಕ್ಕೆ ರಸ್ತೆಗಿಳಿದು ಜನರಿಗೆ ತೊಂದರೆ ಕೊಡುವುದನ್ನು ಬಿಟ್ಟು ಜನಸಾಮಾನ್ಯರ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಮಾಡಲಿ. ಬಿಜೆಪಿಗೆ ಆತ್ಮೀಯರಾಗಿ ಇರುವವರೊಬ್ಬರ ವರಮಾನ ಒಂದು ದಿನಕ್ಕೆ ₹ 1,300 ಕೋಟಿ ಇದೆ. ಇಂತಹ ನಡವಳಿಕೆಗಳಿಗೆ ಸಂಬಂಧಿಸಿ ದಾಖಲೆ ಸಂಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರ ಕೆಲವು ಸ್ವಾಯತ್ತ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಸ್ತಬ್ಧ ಮಾಡಲು ಹೊರಟಿರುವುದು ತಪ್ಪು. ಆದರೆ, ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ನವರು ಜನಸಾಮಾನ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಹೇಳಿದರು.



Join Whatsapp