ಪೂಂಜನಿಗೆ ಮಸೀದಿಗಳು ತಲ್ವಾರ್ ನಂತೆ, ಪೊಲೀಸ್ ಸ್ಟೇಷನ್’ಗಳು ಮಾವನ ಮನೆಯಂತೆ ಕಾಣಿಸುತ್ತಿದೆ, ಮನಸ್ಥಿತಿ ಬದಲಾಯಿಸಲಿ: ಕೆ.ಅಶ್ರಫ್

Prasthutha|

ಮಂಗಳೂರು: ಇತ್ತೀಚೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ತನ್ನ ಸಹಚರರು ಅಕ್ರಮ ಕ್ವಾರಿ ಗಣಿಗಾರಿಕೆ,ಅಕ್ರಮ ಸ್ಫೋಟಕ ದಾಸ್ತಾನುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಅರೆಸ್ಟ್ ಆದಾಗ, ಪೊಲೀಸ್ ಸ್ಟೇಶನ್ ಗೆ  ತನ್ನ ಮಾವನ ಮನೆಯಂತೆ ನುಗ್ಗಿ ಪೋಲೀಸು ಅಧಿಕಾರಿಗಳಿಗೆ ಆವಾಜ್ ಹಾಕಿ,ಕೇಸು ಹಾಕಿಸಿ ಕೊಂಡ ಪ್ರಕರಣದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದಿಂದಲೇ ತನ್ನನ್ನು ಬೈಸಿಕೊಂಡು,ಬೈಗಳು ಮಾಸುವ ಮುನ್ನವೇ, ಈಗ ಬೋಳಿಯಾರು ಘಟನೆಗೆ ಸಂಬಂಧಿಸಿ ಮಸೀದಿಯ ವಿರುದ್ಧ ಹೇಳಿಕೆ ಕೊಡುತ್ತಾ,ತಲವಾರು,ತಪಾಸಣೆ ಎಂದೆಲ್ಲ ಓದರುತ್ತಿದ್ದಾರೆ. ಪೂಂಜನಿಗೆ ಬಹುಷ ಮಸೀದಿಗಳು ತಲವಾರಿನಂತೆಯೂ, ಪೋಲೀಸು ಸ್ಟೇಶನ್ ಗಳು ತನ್ನ ಮಾವನ ಮನೆಯಂತೆ ಕಾಣಿಸುವ ಮನಸ್ಥಿತಿ ಇದ್ದ ಹಾಗಿದೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು,  ಪೂಂಜಾ ಆದಷ್ಟು ಶೀಘ್ರ ಈ ಮನಸ್ಥಿತಿಯನ್ನು ತ್ಯಜಿಸಿದರೆ ಅವರಿಗೆ ಒಳ್ಳೆಯದು. ಬದಲಾಗಿ ಮಸೀದಿಯಲ್ಲಿ ತಲವಾರು ಇದೆ, ಪೋಲೀಸು ಸ್ಟೇಶನ್ ನಿಮ್ಮ ಅಪ್ಪನದ್ದಾ  ಎಂದು ಪೊಲೀಸರಿಗೆ ಅವಾಜ್ ಹಾಕುವ ಮನಸ್ಥಿತಿ ಮುಂದುವರಿದರೆ ಪೂಂಜಾರನ್ನು ಸಮರ್ಪಕವಾಗಿ ನಿರ್ವಹಣೆ ಮಾಡ ಬೇಕಾದೀತು, ಪೂಂಜಾ ಮತ್ತು ಸಹಚರರು ಸರಿಯಾಗಿ ಅರಿಯಲಿ. ಪೂಂಜಾ ರವರು ತಾನು, ಎಲ್ಲಿ ಅಷ್ಟೂ ತಲವಾರುಗಳನ್ನು ನೋಡಿದ್ದಾರೆ ಎಂದಾದರೂ ಹೇಳಿದರೆ ಪೊಲೀಸರು ತಾನು ತಲವಾರುಗಳನ್ನು ನೋಡಿದ ಶಾಖೆಗಳನ್ನು ತಪಾಸಣೆ ಮಾಡಲು ಸಿದ್ಧರಿದ್ದಾರೆ. ತಾನು ವೀಕ್ಷಿಸಿದ ವಸ್ತು ತಲವಾರುವೇ ಎಂದು ಕೂಡಾ ಹೇಳಲಿ, ಇನ್ನಿತರ ಏನೇನನ್ನೋ ವೀಕ್ಷಿಸಿ ತಲವಾರು ಎಂದು ಹೇಳದಿರಲಿ. ಪೂಂಜಾ ಇಂತಹ ಹೇಳಿಕೆ ನೀಡಿ ಸಾರ್ವಜನಿಕರನ್ನು ಭಯ ಬೀತಗೊಳಿಸುವ ಚಾಳಿಯನ್ನು ಬಿಟ್ಟು ಬಿಡಲಿ, ಈ ಹಿಂದಿನ ಶಾಸಕತ್ವದ  ತನ್ನ ಚುನಾವಣಾ ಪೂರ್ವ ವೇಳೆಯಲ್ಲಿ ತನ್ನ  ಕಾರು ಅಡ್ಡ ಹಾಕಿ ಯಾರೂ ರಾತ್ರಿಯಲ್ಲಿ ಹ್ಯಾಂಡಲ್ ಇರುವ ತಳವಾರನ್ನು ತೋರಿಸಿ ಬೆದರಿಸಿದ್ದಾರೆ ಎಂದು ಪತ್ರಿಕೆ ಮತ್ತು ಪೊಲೀಸರ ಸಮಕ್ಷಮ ಹೇಳಿಕೆ ನೀಡಿದ್ದು, ಈ ರೀತಿಯ ಅವರ ತಲವಾರು ಹೇಳಿಕೆ ಅವರ ಹುಟ್ಟಿನಿಂದ ಬಂದ ಹವ್ಯಾಸದಂತಿದೆ.ಮಸೀದಿ ಶ್ರದ್ಧಾ ಕೇಂದ್ರಗಳನ್ನು ಗುರಿಯಾಗಿಸಿ ಅವಹೇಳನ ಮಾಡುವುದು ಮೋಕ್ಷಕ್ಕೆ ಲಭ್ಯವಿರುವ ದಾರಿ ಅಲ್ಲ, ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ ಎಂದು ಹೇಳಿದ್ದಾರೆ.

Join Whatsapp