ಚಿಕ್ಕಮಗಳೂರು: ವಿದ್ಯುತ್ ಶಾಕ್​ ನಿಂದ ಬಾಲಕ ಸಾವು; 8 ಮಂದಿ ಸಸ್ಪೆಂಡ್

Prasthutha|

- Advertisement -

ಚಿಕ್ಕಮಗಳೂರು: ವಿದ್ಯುತ್ ಶಾಕ್​​ನಿಂದ 7 ನೇ ತರಗತಿ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ಸೇರಿ 8 ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.

- Advertisement -

ಪ್ರಭಾರ ಪ್ರಾಂಶುಪಾಲ, ನಿಲಯ ಪಾಲಕ ಸೇರಿ 8 ಮಂದಿ ಅಮಾನತುಗೊಳಿಸಿ ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರವೀಣ್ ಬಿ ಬಾಗೇವಾಡಿ ಅವರು ಆದೇಶ ಹೊರಡಿಸಿದ್ದಾರೆ.

ಶಾಲಾ ಆವರಣದಲ್ಲಿ ಇದ್ದ ನೇರಳೆ ಮರದಿಂದ ನೇರಳೆಹಣ್ಣು ಕೀಳಲು ಆಕಾಶ್ ಮತ್ತು ಆವರ ಸ್ನೇಹಿತರು ಹೋಗಿದ್ದರು. ಈ ವೇಳೆ ವಿದ್ಯುತ್ ಶಾಕ್​ನಿಂದ 13 ವರ್ಷದ ಆಕಾಶ್​ ಎಂಬ ಬಾಲಕ ಸಾವನ್ನಪ್ಪಿದ್ದ ಎಂದು ತಿಳಿದು ಬಂದಿದೆ.

Join Whatsapp