ಪೋಕ್ಸೋ ಪ್ರಕರಣ; ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತೆ: ಯಡಿಯೂರಪ್ಪ

Prasthutha|

ಚಿಕ್ಕಬಳ್ಳಾಪುರ: ಈಗಲೇ ನಾನು ಯಾರ ಮೇಲೂ ದೂರೋದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

- Advertisement -


ದೆಹಲಿಗೆ ತೆರಳಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಬೆಂಗಳೂರಿಗೆ ಮರಳಿದ್ದು ಪೋಕ್ಸೋ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದಾರೆ.


ನಾನು ನಿಗದಿತ ಕಾರ್ಯಕ್ರಮದ ಅಂಗವಾಗಿ ದೆಹಲಿಗೆ ತೆರಳಿದ್ದೆ. ಮೊದಲೇ ನಾನು ಜೂನ್ 17ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದೆ. ಆದರೂ ಕೂಡ ಅನಾವಶ್ಯಕವಾಗಿ ಗೊಂದಲ ಉಂಟು ಮಾಡುವ ಕೆಲಸ ಮಾಡಿದರು ಎಂದರು.

- Advertisement -


ಈಗಾಗಲೇ ಹೈಕೋರ್ಟ್ ಸಹ ಬಂಧನ ಕುರಿತು ತಡೆಯಾಜ್ಞೆ ನೀಡಿದೆ. ಈಗಲೇ ನಾನು ಯಾರ ಮೇಲೂ ದೂರೋದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ. ರಾಜ್ಯದ ಜನರಿಗೆ ವಾಸ್ತವ ಏನು ಎಂಬುದು ಗೊತ್ತಿದೆ. ಯಾರು ಕುತಂತ್ರ ಮಾಡಿದರೋ ಅವರಿಗೆ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Join Whatsapp