ಮಂಗಳೂರು | ಬ್ಯಾರಿ ಲಿಪಿಯನ್ನು ಇಂಗ್ಲಿಷ್ ಲಿಪಿಯೊಂದಿಗೆ ಲಿಪ್ಯಂತರಿಸುವ ವೆಬ್ ಸೈಟ್ ಲೋಕಾರ್ಪಣೆ

Prasthutha|

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಲಿಪಿಯನ್ನು ಇಂಗ್ಲಿಷ್ ಲಿಪಿಯೊಂದಿಗೆ ಲಿಪ್ಯಂತರಣ ಮಾಡುವ ವೆಬ್ ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಮಂಗಳೂರಿನ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ನಡೆಯಿತು.ನೂತನ ವೆಬ್ ಸೈಟ್ ಅನ್ನು ದಕ್ಷಿಣ ಕನ್ನಡ ಜಿಲ್ಲಾ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಚಾಲನೆ ನೀಡಿದರು.

- Advertisement -

ಉದ್ಘಾಟನೆ ಬಳಿಕ ಮಾತನಾಡಿದ ಅವರು ಬ್ಯಾರಿ ಭಾಷೆಗೆ ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಇದೆ, ಈ ಭಾಷೆಗೆ ಒಂದು ಲಿಪಿ ಬೇಕು ಎನ್ನುವ ನಿಟ್ಟಿನಲ್ಲಿ ಕಳೆದ ೧೦ ತಿಂಗಳ ಹಿಂದೆ ೧೧ ಮಂದಿ ಸದಸ್ಯರು ಸೇರಿ ಒಂದು ಲಿಪಿಯನ್ನು ಲೋಕಾರ್ಪಣೆ ಮಾಡಲಾಗಿತ್ತು. ಅದಾದ ಕೆಲವೇ ತಿಂಗಳುಗಳಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಬಿಸಿಎ ತೃತೀಯ ವರ್ಷದ ವಿದ್ಯಾರ್ಥಿಗಳಾ ಯು ಟಿ ಮೊಹಮ್ಮದ್ ಮಶ್ಫೂಕ್ ಹುಸೈನ್, ಕೆ ಎ ಇಸ್ಮಾಯಿಲ್ ಶಫೀಕ್ ಮತ್ತು ಮೆಲ್ರಾಯ್ ಪಿಂಟೋ ಸೇರಿ ಬ್ಯಾರಿ ಲಿಪಿ ಇಂಗ್ಲಿಷ್ ಲಿಪಿಯೊಂದಿಗೆ ಲಿಪ್ಯಂತರ ಮಾಡಲು ವಬ್ ಸೈಟ್ ನ್ನು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸಿದ್ದ ಪಡಿಸಿ ಲೋಕಾರ್ಪಣೆಗೆ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.

ಈ ಸಂದರ್ಭ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟಾರ್ ಪೂರ್ಣಿಮಾ, ಸಂತ ಅಲೋಶಿಯಸ್ ಕಾಲೇಜು ರಿಜಿಸ್ಟರ್ ಆಳ್ವಿನ್ ಡೇಸಾ ಮತ್ತಿತರರು ಉಪಸ್ಥಿತರಿದ್ದರು.



Join Whatsapp