ಉತ್ತರಪ್ರದೇಶ: ಮಾಂಸ ಸೇವಿಸಿದ್ದಾನೆಂದು ಆರೋಪಿಸಿ ಯುವಕನ ಬರ್ಬರ ಹತ್ಯೆ

Prasthutha|

ಗಾಝಿಯಾಬಾದ್: ಉತ್ತರ ಪ್ರದೇಶದಲ್ಲಿ ಮತ್ತೆ ಹಿಂದುತ್ವವಾದಿಗಳ ದೌರ್ಜನ್ಯ ಮುಂದುವರಿದಿದ್ದು, ಮಾಂಸ ಸೇವಿಸಿದ್ದಾನೆಂದು ಆರೋಪಿಸಿ ಯುವಕನನ್ನು ಬರ್ಬರ ಹತ್ಯೆಗೈದ ಘಟನೆ ಉತ್ತರಪ್ರದೇಶದ ಗಾಝಿಯಾಬಾದ್‌ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮೀರತ್‌ನ ದೇವಾಲಯವೊಂದರಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಪ್ರವೀಣ್ ಸೈನಿ (22) ಎಂದು ಗುರುತಿಸಲಾಗಿದೆ.

- Advertisement -

ದೇವಾಲಯದ ಬಳಿ ತನ್ನ ಸ್ನೇಹಿತರಾದ ದೇವೇಂದ್ರ ಮತ್ತು ವಿನೋದ್ ಅವರೊಂದಿಗೆ ಊಟ ಮಾಡುವಾಗ ಪ್ರವೀಣ್ ಮೇಲೆ ದಾಳಿ ಮಾಡಿ ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ. ಆದರೆ ಪ್ರವೀಣ್, ಸೋಯಾ ಮತ್ತು ಚಪಾತಿ ತಿನ್ನುತ್ತಿದ್ದ ಎಂದು ಪೊಲೀಸರು ಹೇಳುತ್ತಾರೆ.

ಘಟನೆಯಲ್ಲಿ ಮೂವರನ್ನು ಬಂಧಿಸಲಾಗಿದ್ದು, ಅವರಲ್ಲಿ ನಿತಿನ್ ಸೈನಿಕನಾಗಿದ್ದು, ಉಳಿದ ಇಬ್ಬರು ಅಶ್ವಿನ್ ಮತ್ತು ಅರ್ಜುನ್ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp