ಆಂಬಿಟ್ ಲಾ ಚೇಂಬರ್ ಗೆ ಸೋಮವಾರ ಚಾಲನೆ

Prasthutha|

ಬೆಂಗಳೂರು: ಸಕಾಲದಲ್ಲಿ ಕಾನೂನು ನೆರವು ಸಿಗದೆ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ದೊರಕಿಸಿಕೊಡುವ ಧ್ಯೇಯದೊಂದಿಗೆ ಸಮಾನ ಮನಸ್ಕ ಐವರು ಯುವ ವಕೀಲರು ಆರಂಭಿಸಿರುವ ಆಂಬಿಟ್ ಲಾ ಚೇಂಬರ್ ಸೋಮವಾರ ಉದ್ಘಾಟನೆಗೊಳ್ಳಲಿದೆ.
ಯುವ ವಕೀಲರಾದ ಅಶ್ರಫ್ ಕೆ.ಅಗ್ನಾಡಿ, ಮಜೀದ್ ಖಾನ್, ಆಸಿಫ್ ಬೈಕಾಡಿ, ಸೈಫುದ್ದೀನ್ ಕೆ., ಅಬ್ದುಲ್ ಅನ್ಸಾರ್, ಮುಹಮ್ಮದ್ ಅಝರ್ ಎಂಬ ಸಮಾನ ಮನಸ್ಕರು ಮಹತ್ವದ ಉದ್ದೇಶ ಇಟ್ಟುಕೊಂಡು ಈ ಸಂಸ್ಥೆಯನ್ನು ರಚಿಸಿದ್ದಾರೆ.

- Advertisement -


ಬಡವರು, ದೀನದಲಿತರಿಗೆ ಕಾನೂನು ನೆರವಿನೊಂದಿಗೆ ಅವರಲ್ಲಿ ಕಾನೂನು ಅರಿವು ಮೂಡಿಸುವುದು, ಮಾನವ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮುಂತಾದ ಧ್ಯೇಯಗಳೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಬೆಂಗಳೂರಿನ ಕಬ್ಬನ್ ಪೇಟೆ ಮುಖ್ಯರಸ್ತೆಯಲ್ಲಿರುವ ಹಮೀದ್ ಶಾ ಕಾಂಪ್ಲೆಕ್ಸ್ ನಲ್ಲಿ ಸಂಸ್ಥೆಯ ಕಚೇರಿ ತೆರೆಯಲಾಗಿದ್ದು, ನಾಳೆಯಿಂದ ಕಾರ್ಯಾಚರಿಸಲಿದೆ ಎಂದು ಅಡ್ವೊಕೇಟ್ ಅಶ್ರಫ್ ಕೆ.ಅಗ್ನಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp