ಇಂಡೋನೇಷ್ಯಾದ ಸುಮಾತ್ರಾದಲ್ಲಿ 7.3 ತೀವ್ರತೆಯ ಭೂಕಂಪನ; ಸುನಾಮಿ ಕಟ್ಟೆಚ್ಚರ

Prasthutha|

ಜಕಾರ್ತ: ಇಂಡೋನೇಷ್ಯಾದಲ್ಲಿ ಭಾರೀ ಭೂಕಂಪನದ ಬಳಿಕ ಭಾರೀ ಅಲೆಗಳ ಸುನಾಮಿ ಎದ್ದು ಬರುವ ಎಚ್ಚರಿಕೆಯನ್ನು ಎನ್ ಡಿಎಂಎ- ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿಯು ನೀಡಿದೆ.

- Advertisement -


ಇಂಡೋನೇಷ್ಯಾದ ಪಶ್ಚಿಮ ಪ್ರಾಂತ್ಯವಾದ ಪಶ್ಚಿಮ ಸುಮಾತ್ರಾದಲ್ಲಿ 7.3 ತೀವ್ರತೆಯ ಭಾರೀ ಭೂಕಂಪನ ಮಂಗಳವಾರ ಮುಂಜಾವ ನಡೆದಿದೆ. ಭೂಕಂಪನ ಕೇಂದ್ರವು ಮೆಂಟವಾಲ್ ದ್ವೀಪದಿಂದ 177 ಕಿಮೀ ವಾಯವ್ಯಕ್ಕೆ 84 ಕಿಲೋಮೀಟರ್ ಸಮುದ್ರದ ಅಡಿ ಇದ್ದು, ಅವರ ಕಾಲ ಮುಂಜಾವ 3 ಗಂಟೆಗೆ ಭೂಮಿ ನಡುಕ ಉಂಟಾಗಿದೆ.


ಈ ಭಾರೀ ಭೂಕಂಪವು ಭಯಂಕರ ಅಲೆಗಳನ್ನು ಎಬ್ಬಿಸುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಜನರು ಕಡಲ ತೀರದಿಂದ ಎತ್ತರದ ಸ್ಥಳಗಳಿಗೆ ಓಡುವ ವೀಡಿಯೋವನ್ನು ಎನ್ ಡಿಎಂಎ ಬಿಡುಗಡೆ ಮಾಡಿದೆ. ಜನರು ನಾನಾ ವಾಹನಗಳಲ್ಲಿ, ಕಾಲ್ನಡಿಗೆಯಲ್ಲಿ ಮೇಲೆ ಹೋಗುವಾಗ ಭಾರೀ ಮಳೆಯೂ ಸುರಿಯುತ್ತಿರುವುದು ವೀಡಿಯೋದಲ್ಲಿ ಕಂಡಿದೆ.
ಸುಮಾತ್ರಾ ಪ್ರಾಂತ್ಯದ ರಾಜಧಾನಿ ಪಡಾಂಗ್ ಅಲ್ಲದೆ ಸುತ್ತಮುತ್ತಲೆಲ್ಲ ನೆಲ ಕಂಪಿಸಿದ ಅನುಭವ ಆಗಿದೆ. ಎನ್ ಡಿಎಂಎ ವಕ್ತಾರ ಅಬ್ದುಲ್ ಮುಹರಿಯವರು ಭೂಕಂಪನ 30 ಸೆಕೆಂಡುಗಳ ಕಾಲ ಇದ್ದುದಾಗಿ ಹೇಳಿದರು.
ಎಷ್ಟು ಹಾನಿಯಾಗಿದೆ ಎನ್ನುವ ಬಗ್ಗೆ ಅಧಿಕಾರಿಗಳು ಇನ್ನೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸುಮಾತ್ರಾದ ತೆಲುಕ್ ದಲಾಮ್ ನಿಂದ 105 ಕಿಮೀ ದೂರದಲ್ಲಿ 7.1 ತೀವ್ರತೆಯ ಭೂಕಂಪ ಆದುದಾಗಿ ಯುಎಸ್ಎ ಜಿಯಾಲಾಜಿಕಲ್ ಸರ್ವೆ ಹೇಳಿದೆ.

Join Whatsapp