75 ವರ್ಷದ ಮುದುಕನಿಂದ 62 ವರ್ಷದ ವೃದ್ಧೆಯ ಅತ್ಯಾಚಾರ !

Prasthutha|

ಜಬಲ್’ಪುರ್: ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಪ್ರತನಿತ್ಯ ಸುದ್ದಿಯಾಗುತ್ತಿರುವುದರ ನಡುವೆ 75 ವರ್ಷದ ಮುದುಕನೋರ್ವ 65 ವರ್ಷದ ವೃದ್ಧೆಯ ಮೇಲೆ ಅತ್ಯಚಾರ ನಡೆಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

- Advertisement -

ಮಧ್ಯಪ್ರದೇಶದ ಜಬಲ್’ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹರಾಷ್ಟ್ರದಿಂದ ಕೂಲಿ ಕೆಲಸ ಅರಸಿಕೊಂಡು ಮಧ್ಯಪ್ರದೇಶಕ್ಕೆ ಬಂದಿದ್ದ 62 ವರ್ಷದ ವೃದ್ಧೆಗೆ ಜಬಲ್’ಪುರದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ 75 ವರ್ಷದ ಮುದುಕನ ಪರಿಚಯವಾಗಿತ್ತು. ಆಶ್ರಯ ನೀಡುತ್ತೇನೆ ಎಂದು ಹೇಳಿ ಮನೆಗೆ ಕರೆದುಕೊಂಡು ಹೋಗಿದ್ದ ಮುದುಕ, ಕಳೆದ 4 ತಿಂಗಳಿನಿಂದ ವೃದ್ಧೆಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾನೆ. ಈ ವಿಷಯವನ್ನು ಹೊರಗಡೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಮಹಿಳೆಯು ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಯ ದೂರಿನನ್ವಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಸಂಬಂಧಿತ IPC ಸೆಕ್ಷನ್’ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Join Whatsapp