ವಿದ್ಯುತ್ ಕಳ್ಳತನಕ್ಕೆ 18 ವರ್ಷ ಜೈಲು; ಅದೇನು ಕೊಲೆಯೇ ಎಂದು ಕೇಳಿ ತಕ್ಷಣ ಬಿಡುಗಡೆಗೆ ಆದೇಶಿಸಿದ ಸುಪ್ರೀಂಕೋರ್ಟ್

Prasthutha|

ನವದೆಹಲಿ: ಉತ್ತರ ಪ್ರದೇಶದ ವ್ಯಕ್ತಿಯೊಬ್ಬನಿಗೆ ವಿದ್ಯುತ್ ಕಳ್ಳತನ ಮಾಡಿದ್ದಕ್ಕಾಗಿ 18 ವರ್ಷ ಜೈಲು ಶಿಕ್ಷೆ ನೀಡಿದ್ದಕ್ಕೆ ಸರ್ವೋಚ್ಚ ನ್ಯಾಯಾಲಯವು ಇಂದು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿ, ಇದೇನು ಕೊಲೆಯೇ ಎಂದು ಕಿಡಿಕಾರಿದೆ.

- Advertisement -


ನಾಗರಿಕರೊಬ್ಬರ ಸ್ವಾತಂತ್ರ್ಯವನ್ನು ರದ್ದುಗೊಳಿಸಿದ ಕ್ರಮವಿದು ಎಂದು ಸುಪ್ರಿಂಕೋರ್ಟ್ ಹೇಳಿದ್ದು, ಅಧಿಕಾರಿಗಳ ವರ್ತನೆಯನ್ನು ಖಂಡಿಸಿದೆ.
ಇಕ್ರಾಮ್ ಎಂಬ ವ್ಯಕ್ತಿಯನ್ನು ಕೂಡಲೆ ಬಿಡುಗಡೆ ಮಾಡಬೇಕು. ಆತ ಈಗಾಗಲೆ ಮೂರು ವರ್ಷ ಜೈಲಿನಲ್ಲಿ ಕಳೆದಿದ್ದಾನೆ. ವಿಚಾರಣಾ ಕೋರ್ಟು ಆತನಿಗೆ 9 ಎಫ್’ಐಆರ್’ಗೆ ತಲಾ 2 ವರ್ಷದಂತೆ 18 ವರ್ಷ ಶಿಕ್ಷೆ ನೀಡಿತ್ತು.


“ನಾವು ವ್ಯಕ್ತಿಗತ ಸ್ವಾತಂತ್ರ್ಯವನ್ನು ಪರಿಗಣಿಸಿ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ನಾವಿಲ್ಲಿ ಏಕೆ ಇದ್ದೇವೆ?” ಎಂದು ಸಿಜೆಐ ಡಿ. ವೈ. ಚಂದ್ರಚೂಡ್ ಖಾರವಾಗಿಯೇ ಹೇಳಿದರು.
ಉತ್ತರ ಪ್ರದೇಶ ಸರ್ಕಾರದ ಪರ ಹಾಜರಾದ ವಕೀಲರು, ಇಕ್ರಾಮ್ ಬಿಡುಗಡೆ ಮನವಿ ಮನ್ನಿಸಬಾರದು ಎಂದು ವಾದಿಸಿದರು. ಅದಕ್ಕೆ ಸಿಜೆಐ “ನೀವು ವಿದ್ಯುತ್ ಕಳ್ಳತನವನ್ನು ಕೊಲೆಗೆ ಸಮೀಕರಿಸಬಾರದು” ಎಂದು ಹೇಳಿದರು.

- Advertisement -


“ಇಂತಹ ಶೋಕತಪ್ತರ ಗೋಳನ್ನು ಸುಪ್ರೀಂ ಕೋರ್ಟು ಕೇಳಲಿದೆ. ಯಾವ ವಿಷಯ ಕೂಡ ನಮಗೆ ದೊಡ್ಡದೂ ಅಲ್ಲ ಸಣ್ಣದೂ ಅಲ್ಲ. ನಾವು ಪ್ರತಿ ದಿನ ಇಂತಹ ವಿಷಯಗಳಿಗೆ ಎದುರಾಗುತ್ತಲೇ ಇರುತ್ತೇವೆ. ವಿದ್ಯುತ್ ಕದ್ದ ಎಂದು ಒಬ್ಬನನ್ನು ನಾವು 18 ವರ್ಷ ಜೈಲಿಗೆ ಕಳಿಸಲು ಆಗುತ್ತದೆಯೇ?” ಎಂದು ಚಂದ್ರಚೂಡ್ ಪ್ರಶ್ನಿಸಿದರು.
2019ರಲ್ಲಿ ಬಂಧನವಾದಾಗಿನಿಂದ ಇಕ್ರಾಮ್ ಜೈಲಲ್ಲಿ ಇದ್ದಾನೆ. ವಿದ್ಯುತ್ ಕಳ್ಳತನಕ್ಕೆ ಒಂಬತ್ತು ಎಫ್’ಐಆರ್ ದಾಖಲಿಸಲಾಗಿತ್ತು.

Join Whatsapp