ಮಲೇಷ್ಯಾದಲ್ಲಿ ಭೀಕರ ಭೂಕುಸಿತ: 16 ಸಾವು, 20 ಮಂದಿ ಕಾಣೆ

Prasthutha|

ಕೌಲಲಾಂಪುರ: ಮಲೇಷ್ಯಾದಲ್ಲಿ ಶುಕ್ರವಾರ ಬೆಳಿಗ್ಗೆ ಭೂಕುಸಿತ ಸಂಭವಿಸಿದ್ದು, 90 ಜನರು ಅದರಲ್ಲಿ ಸಿಲುಕಿದ್ದು, 16 ಶವಗಳನ್ನು ಹೊರತೆಗೆಯಲಾಗಿದೆ.

- Advertisement -


ಇನ್ನೂ 30 ಜನ ಮಣ್ಣಿನಡಿ ಇರಬಹುದು ಎಂದು ಶಂಕಿಸಲಾಗಿದೆ. ಅಧಿಕೃತವಾಗಿ 20 ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ರಾಜಧಾನಿ ಕೌಲಾಲಂಪೂರದ ಹೊರ ವಲಯದ ಸೇಲಂಗೀರ್’ನಲ್ಲಿ ಈ ಭೂಕುಸಿತ ಆಗಿದೆ. ಮೂರು ಗಂಟೆಯ ಹೊತ್ತಿಗೆ ಗುಡ್ಡದ ಬದಿಯ ಸಾವಯವ ಕೃಷಿ ತೋಟವು ಸಂಪೂರ್ಣವಾಗಿ ಮಣ್ಣಿನ ಸಮೇತ ಕುಸಿದಿದೆ ಎಂದು ಅಗ್ನಿಶಾಮಕ ದಳದವರು ತಿಳಿಸಿದ್ದಾರೆ.
“ನಾನು ಗುಡುಗಿನ ಮಾದರಿಯ ದೊಡ್ಡ ಶಬ್ದವನ್ನು ಕೇಳಿದೆ. ಆದರೆ ಅದು ಮಣ್ಣಿನೊಂದಿಗೆ ದೊಡ್ಡ ಬಂಡೆ ಉರುಳಿಕೊಂಡು ಬರುವುದಾಗಿತ್ತು.” ಎಂದು ದುರಂತದಿಂದ ಬಚಾವಾದ ಬೆರಿಟಾ ಹೆರಿಯನ್ ಹೇಳಿದ್ದಾರೆ.


“ ಭೂ ಕುಸಿತವಾದಾಗ ನಾನು ಕೂಡಲೆ ಕೂಗಿ ದೂರ ಓಡಿದೆ. ನನ್ನ ತಾಯಿಯೂ ತೆವಳಿ ಪಾರಾಗುವುದರಲ್ಲಿ ಸಫಲರಾದರು” ಎಂದೂ ಹೆರಿಯನ್ ಹೇಳಿದರು.
ನನ್ನ ಸಹೋದರರಿಬ್ಬರು ಸತ್ತರು. ಒಬ್ಬರು ಎಲುಬು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ ಎಂದೂ ಆಕೆ ಹೇಳಿದರು.

- Advertisement -


90 ಜನ ಸಿಲುಕಿದ್ದರು. 59 ಜನರನ್ನು ರಕ್ಷಿಸಲಾಯಿತು; ಇನ್ನೂ 22 ಜನರು ಕಾಣೆಯಾಗಿದ್ದಾರೆ ಎಂದು ಅಗ್ನಿಶಾಮಕ ದಳದ ಅದಿಕಾರಿ ತಿಳಿಸಿದ್ದಾರೆ.

Join Whatsapp