2ನೇ ಕ್ವಾಲಿಫೈಯರ್‌ಗೆ ಪ್ರವೇಶ ಪಡೆದ ರಾಜಸ್ಥಾನ್: ಐಪಿಎಲ್​ ಅಭಿಯಾನ ಮುಕ್ತಾಯಗೊಳಿಸಿದ ರಾಯಲ್ ಚಾಲೆಂಜರ್ಸ್

Prasthutha|

ಅಹಮದಾಬಾದ್: ಯಶಸ್ವಿ ಜೈಸ್ವಾಲ್ (45 ರನ್​) ಹಾಗೂ ರಿಯಾನ್ ಪರಾಗ್​ (36 ರನ್​) ಬ್ಯಾಟಿಂಗ್ ಬಲದಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ರ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 2ನೇ ಕ್ವಾಲಿಫೈಯರ್ ಗೆ ಪ್ರವೇಶ ಪಡೆದಿದೆ.

- Advertisement -

ಆರ್ ಸಿಬಿ ನೀಡಿದ 173 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ರಾಜಸ್ಥಾನ್ 19 ಓವರ್‌ನಲ್ಲಿ ಗುರಿ ತಲುಪಿ 2ನೇ ಕ್ವಾಲಿಫೈಯರ್ ಗೆ ಪ್ರವೇಶ ಪಡೆದಿದೆ.

ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ 45ರನ್, ರಿಯಾನ್ ಪರಾಗ್ 36 ರನ್ ಮತ್ತು ಶಿಮ್ರಾನ್ ಹೇಟ್ಮೆಯರ್ 26 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಬಂದ ರೋವ್ಮನ್ ಪವೆಲ್ 16 ರನ್ ಗಳಿಸುವುದರೊಂದಿಗೆ ಗೆಲುವು ರಾಜಸ್ಥಾನದ ಪರವಾಯಿತು.

- Advertisement -

ಆರ್ ಸಿಬಿ ಪರ ಮಹಮದ್ ಸಿರಾಜ್ 2, ಲಾಕಿ ಫರ್ಗುಸನ್, ಕರಣ್ ಶರ್ಮಾ, ಕೆಮರಾನ್ ಗ್ರೀನ್ ಒಂದೊಂದು ವಿಕೆಟ್ ಪಡೆದರು.

ಲೀಗ್ ಹಂತದಲ್ಲಿ ಸತತ ನಾಲ್ಕು ಸೋಲು ಹಾಗೂ ಮಳೆಯಿಂದಾಗಿ ಒಂದು ಪಂದ್ಯ ರದ್ದುಗೊಂಡ ಕಾರಣ ಬೇಸರಕ್ಕೆ ಒಳಗಾಗಿದ್ದ ರಾಜಸ್ಥಾನ್ ಬಳಗ ಈ ಗೆಲುವಿನೊಂದಿಗೆ ಸಂತೃಪ್ತಗೊಂಡಿದೆ. ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆದ ಸಂಭ್ರಮದಲ್ಲಿದೆ. ಸಂಜು ಬಳಗ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಎದುರಿಸಲಿದೆ.

ಈ ಸೋಲಿನೊಂದಿಗೆ ಆರ್​ಸಿಬಿ ತಂಡದ 2024ರ ಐಪಿಎಲ್​ ಅಭಿಯಾನ ಮುಕ್ತಾಯಗೊಂಡಿದೆ. ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿರುವುದೇ ರೆಡ್​ ಆರ್ಮಿಯ ದೊಡ್ಡ ಸಾಧನೆ ಎಂಬಂತಾಗಿದೆ.

Join Whatsapp