ತಾಯಿಯ ಚಿತಾಭಸ್ಮದೊಂದಿಗೆ ದುಬೈಯಿಂದ ಭಾರತಕ್ಕೆ ಬಂದ 11 ತಿಂಗಳ ಮಗು!

Prasthutha: June 19, 2021

ತಮಿಳುನಾಡಿನಲ್ಲೊಂದು ಮನಕಲಕುವ ಘಟನೆ!

ಚೆನ್ನೈ: ಕೋವಿಡ್ ನಿಂದ ಮೃತಪಟ್ಟ ತಾಯಿಯ ಚಿತಾಭಸ್ಮದೊಂದಿಗೆ 11 ತಿಂಗಳ ಮಗು ದುಬೈನಿಂದ ಭಾರತಕ್ಕೆ ಬಂದಿದ್ದು, ತಮಿಳುನಾಡಿನ ಕಲ್ಲಾಕುರಿಚಿ ಮೂಲದ ಮಗುವಿನ ತಂದೆ ವೇಲಾವನ್ ಅವರು ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗುವನ್ನು ಸ್ವೀಕರಿಸಿದ್ದಾರೆ.

ವೇಲಾಯವನ್ ಮತ್ತು ಅವರ ಪತ್ನಿ ಭಾರತಿ ತಿರುಚಿರಾಪಳ್ಳಿಯ ನಿವಾಸಿಗಳಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದರು. ಹಿರಿಯವನು ಮೂತ್ರಪಿಂಡ ಕಾಯಿಲೆಯಿಂದ ಸಾವನ್ನಪ್ಪಿದ್ದನು. ಮಗನ ವೈದ್ಯಕೀಯ ವೆಚ್ಚಗಳನ್ನು ಭರಿಸಿ ಬಳಲಿಹೋಗಿದ್ದ ಕುಟುಂಬದ ಜವಾಬ್ಧಾರಿಯನ್ನು ಹೊತ್ತ ಭಾರತಿ ದುಬೈಗೆ ಹೋಗಿದ್ದರು.

ಒಂಬತ್ತು ತಿಂಗಳ ಮಗು ದೇವಶ್ ನನ್ನೂ ಕೂಡ ತನ್ನ ಜೊತೆಗೆ ದುಬೈಗೆ ಕೊಂಡು ಹೋದ ಭಾರತಿ ಕೋವಿಡ್ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದರು. ಮೇ 29 ರಂದು ನಿಧನರಾದ ಭಾರತಿಯ ಅಂತ್ಯಸಂಸ್ಕಾರ ದುಬೈಯಲ್ಲೇ ನೆರವೇರಿಸಲಾಗಿತ್ತು. ನಂತರ ತಾಯ್ನಾಡಿಗೆ ತಂದು ಅಂತ್ಯಕ್ರಿಯೆ ನಡೆಸಲು ಚಿತಾಭಸ್ಮವನ್ನೂ ಸಂಗ್ರಹಿಸಲಾಗಿತ್ತು.

ಸಂಬಂಧಪಟ್ಟವರು ಮಗುವನ್ನು ಊರಿಗೆ ತರಲು ಚಿಂತನೆ ನಡೆಸಿದಾಗ ಸತೀಶ್ ಕುಮಾರ್ ಎಂಬವರು ಇಂಡಿಗೋ ವಿಮಾನದಲ್ಲಿ ತಿರುಚಿರಾಪಳ್ಳಿಗೆ ಬರುತ್ತಿದ್ದಾರೆ ಎಂದು ತಿಳಿದಾಗ ಮಗುವನ್ನು ಮತ್ತು ಭಾರತಿಯ ಚಿತಾಭಸ್ಮವನ್ನು ಸತೀಶ್ ಕುಮಾರ್ ಅವರೊಂದಿಗೆ ಭಾರತಕ್ಕೆ ಕಳುಹಿಸಲಾಯಿತು.

ತಿರುಚಿರಾಪಳ್ಳಿಯಲ್ಲಿ ತನ್ನ ಮಗು ಮತ್ತು ಪತ್ನಿಯ ಚಿತಾ ಭಸ್ಮವನ್ನು ವೇಲಾಯನ್ ಸತೀಶ್ ಕುಮಾರ್ ಅವರಿಂದ ಸ್ವೀಕರಿಸುವಾಗ ಕುಟುಂಬಸ್ಥರ ರೋಧನೆ ಮನ ಕಲಕುವಂತಿತ್ತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ