ಬಳ್ಳಾರಿ : ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಪಾದ್ರಿ !

Prasthutha: June 19, 2021

ಬಳ್ಳಾರಿ : ಪ್ರಾರ್ಥನೆ ಸಲ್ಲಿಸಲು ತಾಯಿಯೊಂದಿಗೆ ತೆರಳಿದ್ದ ೧೭ ವರ್ಷದ ಬಾಲಕಿಯನ್ನು ದೇವರು ಹೇಳಿದ್ದಾನೆಂದು ನಂಬಿಸಿ ಚರ್ಚ್ ಪಾದ್ರಿ ತಾಳಿ ಕಟ್ಟಿದ ಘಟನೆ ಬಳ್ಳಾರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಕಳೆದ ತಿಂಗಳು ಮೇ ೧೪ ರಂದು ತನ್ನ ತಾಯಿಯೊಂದಿಗೆ ಪ್ರಾರ್ಥನೆ ಸಲ್ಲಿಸಲು ಎಂದಿನಂತೆ ಚರ್ಚ್ಗೆ ತೆರಳಿದ್ದ ವೇಳೆ ಚರ್ಚ್ ಪಾದ್ರಿ ದೇವರು ನಿನಗೆ ತಾಳಿ ಕಟ್ಟುವಂತೆ ಹೇಳಿದ್ದಾರೆಂದು ನಂಬಿಸಿ ದಿಢೀರನೆ ತಾಳಿ ಕಟ್ಟಿದ್ದಾನೆ. ಇದರಿಂದ ವಿಚಲಿತಗೊಂಡ ತಾಯಿ ಮತ್ತು ಮಗಳು ಮನೆಗೆ ತೆರಳಿ ಗ್ರಾಮದ ಮುಖಂಡರಿಗೆ ಮಾಹಿತಿ ತಿಳಿಸಿದ್ದು , ಸುದ್ದಿ ತಿಳಿಯುತ್ತಿದ್ದತೆಂಯೇ ಪಾದ್ರಿ ಪರಾರಿಯಾಗಿದ್ದಾನೆ. ಇದೀಗ ತೆಕ್ಕಲಕೋಟೆ ಪೋಲಿಸ್ ಠಾಣೆಗೆ ಯುವತಿಯ ತಾಯಿ ಪಾದ್ರಿಯ ವಿರುದ್ದ ದೂರು ಸಲ್ಲಿಸಿದ್ದಾರೆ.

ಯುವತಿಯ ತಾಯಿ ನೀಡಿದ ಹೇಳಿಕಯ ಪ್ರಕಾರ ಚರ್ಚ್ ಪಾದ್ರಿಯ ವಿರುದ್ದ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಪೋಲಿಸರು ಜಾಲ ಬೀಸಿದ್ದು , ತನಿಖೆ ಮುಂದುವರೆಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ