ಹಸುವಿನ ಹೊಟ್ಟೆಯಲ್ಲಿ 77 ಕೆಜಿ ಐಸ್ ಕ್ರೀಮ್ ಕಪ್ ಗಳು ಪತ್ತೆ

Prasthutha|

ಸೂರತ್:  ಅನಾರೋಗ್ಯಕ್ಕೆ ಗುರಿಯಾದ ಹಸುವಿನ ಹೊಟ್ಟೆಯಲ್ಲಿ ಬರೋಬ್ಬರಿ 77 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ಕಸವನ್ನು ಇತ್ತೀಚೆಗೆ ಹೊರತೆಗೆಯಲಾಗಿದೆ.

- Advertisement -

ಗುಜರಾತ್‌ ನ ಆನಂದ್ ಪ್ರದೇಶದ ಪಶುವೈದ್ಯರು ಹಸುವಿನ ಹೊಟ್ಟೆಯಿಂದ ಕಸವನ್ನು ಹೊರತೆಗೆದಿದ್ದು, ಅದರಲ್ಲಿ ಐಸ್ ಕ್ರೀಮ್ ಕಪ್ ಗಳು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳು ಸೇರಿವೆ ಎಂದು ವರದಿ ಹೇಳಿವೆ.

ಅಸ್ವಸ್ಥಗೊಂಡ ಹಸುವನ್ನು ಎನ್‌ ಜಿಒ ಆಸ್ಪತ್ರೆಗೆ ಕರೆದೊಯ್ದು, .ಆನಂದ್‌ ನಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಪಶುವೈದ್ಯರ ತಂಡ ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಪ್ಲಾಸ್ಟಿಕ್ ಅವಶೇಷಗಳನ್ನು ಹೊರತೆಗೆದಿದೆ.

- Advertisement -

ಜನರು ಎಸೆದ ಪ್ಲಾಸ್ಟಿಕ್ ತಿಂದು ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಎಲ್ಲೆಡೆ ಹೆಚ್ಚಾಗುತ್ತಿದ್ದು, ಪ್ರತಿ ವಾರ  ರಸ್ತೆ ಬದಿಯ ತೊಟ್ಟಿಗಳಿಂದ ಪ್ಲಾಸ್ಟಿಕ್ ತಿಂದು ಅಸ್ವಸ್ಥಗೊಂಡ ಮೂರರಿಂದ ನಾಲ್ಕು ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಆನಂದ್‌ ನಲ್ಲಿರುವ ಈ ಪಶುವೈದ್ಯಕೀಯ ಸಂಸ್ಥೆ ಯ ವೈದ್ಯರು ತಿಳಿಸಿದ್ದಾರೆ.

Join Whatsapp