ವಿರಾಜಪೇಟೆ: ನಾಪತ್ತೆಯಾಗಿದ್ದ ಗ್ರಾ.ಪಂ. ಮಾಜಿ ಸದಸ್ಯನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ

Prasthutha|

ವಿರಾಜಪೇಟೆ: ನಾಪತ್ತೆಯಾಗಿದ್ದ ಗ್ರಾಮ ಪಂಚಾಯತ್ ಮಾಜಿ ಸದಸ್ಯನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

- Advertisement -


ಬಿಟ್ಟಂಗಾಲ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬೊಪ್ಪಂಡ ವಸಂತ (46) ನಿನ್ನೆ ನಾಪತ್ತೆಯಾಗಿದ್ದರು.
ವಿರಾಜಪೇಟೆ ಸಮೀಪದ ನಾಂಗಾಲ ನಿವಾಸಿ ವಸಂತ್ ನಿನ್ನೆ ಬೆಳಗ್ಗೆ ಎಂದಿನಂತೆ ತಮ್ಮ ತೋಟಕ್ಕೆ ಸ್ಕೂಟರ್ ನಲ್ಲಿ ತೆರಳಿದ್ದರು. ಎಷ್ಟು ಹೊತ್ತಾದರೂ ಅವರು ಮರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಹುಡುಕಾಟ ನಡೆಸಿದಾಗ ಅವರ ಸ್ಕೂಟರ್ ತೋಟದ ಸಮೀಪ ಕೆರೆಯ ಪಕ್ಕದಲ್ಲಿ ಪತ್ತೆಯಾಗಿತ್ತು.


ಈ ಕುರಿತು ವಸಂತ ಅವರ ಪತ್ನಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಪತಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಇಂದು ಪಕ್ಕದ ಕೆರೆಯಲ್ಲಿ ವಸಂತ ಅವರ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಸಂತ್ ಸಾವಿನ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Join Whatsapp