ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ ಮೋದಿ, ನಮಗೆ ದೇಶ ಪ್ರೇಮ ಪಾಠ ಮಾಡುತ್ತಾರೆ : ಸಿದ್ಧರಾಮಯ್ಯ ವಾಗ್ದಾಳಿ

Prasthutha|

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಸರ್ಕಾರದಲ್ಲಿ ಹಲವು ಯೋಜನೆಗಳು ಜಾರಿಯಾಗಿವೆ. ಆದರೆ ಈಗ ಎಲ್ಲಾ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಇವರು ನಮಗೆ ದೇಶ ಭಕ್ತಿ ಪಾಠವನ್ನು ಮಾಡುತ್ತಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

- Advertisement -

ನಾವು ಹಲವು ಯೋಜನೆಗಳನ್ನ ತಂದಿದ್ದೆವು. ಆದರೆ ಇವರು ಎಲ್ಲಾ ಯೋಜನೆ ನಿಲ್ಲಿಸಿದ್ದಾರೆ. ಅದಾನಿ ವಿಶ್ವದಲ್ಲೇ ನಂಬರ್ ವನ್ ಶ್ರೀಮಂತ. ಅಂಬಾನಿಗಿಂತ ದೊಡ್ಡ ಶ್ರೀಮಂತನಾಗಿದ್ದಾನೆ. ಇದಕ್ಕೆ ಪ್ರಧಾನಿ ಮೋದಿಯವರ ಕುಮ್ಮಕ್ಕಿದೆ. ಅದಾನಿ ಬಿಕಾಂ ಓದಲು ಅವನಿಗಾಗಲಿಲ್ಲ. ಅಂತವನು ಇಂದು ಏಷ್ಯಾದಲ್ಲೇ ದೊಡ್ಡ ಶ್ರೀಮಂತ. ಇವರು ನಮಗೆ ದೇಶ ಭಕ್ತಿ ಪಾಠ ಮಾಡುತ್ತಾರೆ. ಸ್ವಾತಂತ್ರ್ಯಕ್ಕಾಗಿ ಒಬ್ಬರಾದರು ಪ್ರಾಣ ತ್ಯಾಗ‌ ಮಾಡಿದ್ರಾ. ಮೋದಿನೇ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ. ಬಿಜೆಪಿ ಅವರಿಗೆ ಮಾನ ಮರ್ಯಾದೆ ಇಲ್ಲ. ಬಿಜೆಪಿಯವರು ಭಂಡರು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟದಲ್ಲಿ 700 ರೈತರು ಮೃತಪಟ್ಟಿದ್ದಾರೆ. ಲಖೀಂಪುರ್ ಕೇರಿಯಲ್ಲಿ ರೈತರ ಮೇಲೆ ಕಾರು ಹತ್ತಿಸಿದ್ರು. ಕೇಂದ್ರ ಸಚಿವರ ಮಗನೇ ಕಾರು ಹತ್ತಿಸಿ ಕೊಂದಿದ್ದಾನೆ. ಇವರು ಇನ್ನೆಂಥಾ ಕ್ರೂರಿಗಳಿರಬೇಕೆಂದು ಆಕ್ರೋಶ ಹೊರ ಹಾಕಿದರು.

Join Whatsapp