ಬ್ಯಾಂಕ್ ವಂಚನೆ ಪ್ರಕರಣ | ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ಕೋರ್ಟ್ ಆದೇಶ

Prasthutha|

- Advertisement -

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ನ ನ್ಯಾಯಾಲಯ ಆದೇಶ ನೀಡಿದೆ.

“ನೀರವ್ ಮೋದಿ ಎದುರಿಸುತ್ತಿರುವ ಆರೋಪಗಳಿಗೆ ಸಾಕ್ಷ್ಯಗಳಿವೆ, ಅವರನ್ನು ಭಾರತಕ್ಕೆ ಕಳುಹಿಸಿದರೆ ಅವರಿಗೆ ನ್ಯಾಯದಾನದ ನಿರಾಕರಣೆಯಾಗುವುದಿಲ್ಲ” ಎಂದು ಬ್ರಿಟನ್ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

- Advertisement -

ನೀರವ್ ಮೋದಿ ಮುಂಬೈನ ಆರ್ಥರ್ ಜೈಲಿನ ‘ಬ್ಯಾರಕ್ 12’ನಲ್ಲಿರುವುದಕ್ಕೆ ಸಮರ್ಥರಾಗಿದ್ದಾರೆ, ಅವರು ಅಲ್ಲಿಯೇ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆಯಬಹುದು” ಎಂದು ಬ್ರಿಟನ್ ಕೋರ್ಟ್ ನ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಜಿ ಆದೇಶಿಸಿದ್ದಾರೆ.

ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದೆದುರು, ಸೌತ್ ವೆಸ್ಟ್ ಲಂಡನ್ ನಲ್ಲಿರುವ ವಾಂಡ್ಸ್ ವರ್ತ್ ಜೈಲಿನಿಂದ ನೀರವ್ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಕೋರ್ಟ್ ಆದೇಶವನ್ನು ಬ್ರಿಟನ್ ನ ಗೃಹ ಕಾರ್ಯದರ್ಶಿಗೆ ಕಳಿಸಲಾಗುವುದು.  ನಂತರ ನೀರವ್ ಮೋದಿಗೆ ಹೈಕೋರ್ಟ್ ಮೊರೆ ಹೋಗುವ ಅವಕಾಶವೂ ಇರಲಿದೆ.

Join Whatsapp