ಸ್ಮಾರ್ಟ್ ಸಿಟಿ ನಿರ್ಮಾಣ, ನದಿ ಸ್ವಚ್ಛಗೊಳಿಸುವುದು ಯಾವಾಗ? : ಬಿಜೆಪಿಗೆ ಅಖಿಲೇಶ್ ಪ್ರಶ್ನೆ

Prasthutha|

ಲಖನೌ : ಸ್ಮಾರ್ಟ್ ಸಿಟಿ ಯಾವಾಗ ನಿರ್ಮಾಣ ಮಾಡುತ್ತೀರಿ? ನದಿಗಳನ್ನು ಯಾವಾಗ ಸ್ವಚ್ಛಗೊಳಿಸುತ್ತೀರಿ? ಎಂಬುದನ್ನು ಜನತೆಗೆ ತಿಳಿಸಿ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಪ್ರಶ್ನೆಗಳನ್ನು ಕೇಳಿದ್ದಾರೆ.

- Advertisement -

ಬಿಜೆಪಿ ತನ್ನ ಸಂಕಲ್ಪ ಪತ್ರದಂತೆ ಕೆಲಸ ಮಾಡಲು ಉತ್ತರ ಪ್ರದೇಶದ ಜನರು ಅವರಿಗೆ ಬಹುಮತ ನೀಡಿದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನರಿಗೆ ನೀಡಿದ ಸಂಕಲ್ಪ ಪತ್ರದ ಭರವಸೆಯನ್ನು ಮರೆತಿದೆ ಎಂದು ಅವರು ತಿಳಿಸಿದರು.

ಸ್ಮಾರ್ಟ್ ಸಿಟಿಗಳನ್ನು ಯಾವಾಗ ನಿರ್ಮಿಸಲಾಗುವುದು ಎಂದು ಬಿಜೆಪಿಯು ಜನರಿಗೆ ಉತ್ತರ ನೀಡಬೇಕು. ಅವರು ಗಂಗಾ ನದಿಯನ್ನು ಸ್ವಚ್ಛಗೊಳಿಸುತ್ತೇವೆ ಎಂದು ಪ್ರಮಾಣ ವಚನ ಸ್ವಿಕರಿಸಿದರು. ಆದರೆ, ನದಿ ಇನ್ನೂ ಸ್ವಚ್ಛವಾಗಿಲ್ಲ ಎಂದು ಅಖಿಲೇಶ್ ಯಾದವ್ ದೂರಿದರು.

- Advertisement -

ಸರಕಾರವು 2.5 ಲಕ್ಷ ಕೋಟಿ ರೂ. ಸಂಗ್ರಹಿಸಬೇಕು ಎಂದು ಹೇಳುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಿರುವುದರಿಂದ 2.5 ಲಕ್ಷ ಕೋಟಿ ರೂ.ಗಳನ್ನು ಸರಕಾರ ಈಗಾಗಲೇ ಸಂಗ್ರಹಿಸಿದೆ ಎನಿಸುತ್ತಿದೆ. ಅಲ್ಲದೆ, ಸರಕಾರಿ ಉದ್ಯಮಗಳನ್ನು ಖಾಸಗಿಯವರಿಗೆ ಮಾರಲಾಗುತ್ತಿದೆ. ಸಂವಿಧಾನ ಖಾತರಿಪಡಿಸಿದ ಉದ್ಯೋಗಗಳು ಮತ್ತು ಮೀಸಲಾತಿ ಹಕ್ಕುಗಳ ಪರಿಸ್ಥಿತಿ ಏನು ಎಂದು ಅವರು ಪ್ರಶ್ನಿಸಿದರು.

Join Whatsapp