ಕ್ಷೀರಭಾಗ್ಯ ಯೋಜನೆಯ ಹಾಲಿನ ಪ್ಯಾಕೆಟ್​ ಅಕ್ರಮ ಸಾಗಾಟ| ಮೂವರ ಬಂಧನ

Prasthutha|

►ಬ್ರ್ಯಾಂಡ್​ ಹೆಸರಲ್ಲಿ ಹೆಚ್ಚಿನ ಬೆಲೆ​​ಗೆ ಮಾರಾಟ ಮಾಡುವ ಜಾಲ ಬೇಧಿಸಿದ ಪೊಲೀಸರು

- Advertisement -

ಕಲ್ಬುರ್ಗಿ: ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಕ್ಷೀರಭಾಗ್ಯದಡಿ ಸರಬರಾಜು ಮಾಡಲಾಗುವ ಹಾಲಿನ್ ಪ್ಯಾಕೆಟ್ ಹಾಗೂ ಪೌಡರ್ ಪ್ಯಾಕೆಟ್​​‌ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಹಾಲಿನ ಪ್ಯಾಕೇಟ್​ಗಳು ಹಾಗೂ ಪೌಡರನ್ನು ಪ್ಯಾಕೇಟ್​​ನಿಂದ ಬೇರ್ಪಡಿಸಿ ಚೀಲಕ್ಕೆ ತುಂಬಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ಉಪಳಾಂವ್ ಕ್ರಾಸ್​​ನ ಬಳಿ ಸಬ್ ಅರ್ಬನ್ ಠಾಣೆ ಪೊಲೀಸರು ಮತ್ತು ಮಧ್ಯಾಹ್ನ ಉಪಹಾರ ಯೋಜನೆ ಅಧಿಕಾರಿಗಳು ತಡೆದು ನಿಲ್ಲಿಸಿದ್ದಾರೆ.

- Advertisement -

ತಪಾಸಣೆ ವೇಳೆ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡುವ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ 6 ಕಿಂಟಾಲ್ ಮಿಲ್ಕ್ ಪೌಡರ್​ ಪ್ಯಾಕೇಟ್​ ಪತ್ತೆಯಾಗಿವೆ. ಆರೋಪಿಗಳಾದ ಅನಿಲ್, ಅವುಗಳನ್ನು ಖರೀದಿಸುತ್ತಿದ್ದ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮೋಯಿದ್ದೀನ್ ಮತ್ತು ಗೂಡ್ಸ್ ಚಾಲಕ ಇಮ್ರಾನುದ್ದೀನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಹಾಲಿನ ಪೌಡರನ್ನು ಬೀದರ್​ನ ಹುಮ್ನಾಬಾದ್​​ಗೆ ಸಾಗಿಸುತ್ತಿದ್ದು, ಮಾತ್ರವಲ್ಲದೇ ಹೊರ ರಾಜ್ಯಕ್ಕೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಹಲವೆಡೆ ಶಾಲೆಯ ಹೆಡ್​ಮಾಸ್ಟರ್​ಗಳು, ಶಿಕ್ಷಕರು ಮತ್ತು ಅಂಗನವಾಡಿ ಶಿಕ್ಷಕಿಯರು, ಸಿಬ್ಬಂದಿ ಹಾಲಿನ ಪೌಡರ್ ಪ್ಯಾಕೆಟ್​ಗಳನ್ನ ಹಣಕ್ಕೆ ಸೇಲ್ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಕೆಎಂಎಫ್​ನ 1 ಕೆಜಿಯ 1 ಹಾಲಿನ ಪ್ಯಾಕೇಟ್​​ಗೆ ಸರ್ಕಾರ 275 ರೂಪಾಯಿ ನೀಡುತ್ತದೆ. ಆದರೆ ಅಕ್ರಮ ದಂಧೆಕೋರರು ಶಾಲೆ ಸಿಬ್ಬಂದಿ ಬಳಿ 100-150 ರೂಪಾಯಿ ಕೊಟ್ಟು ಹಾಲಿನ ಪ್ಯಾಕೆಟ್​ಗಳನ್ನ ಕಾಳಸಂತೆಯಲ್ಲಿ ​ ಖರೀದಿಸುತ್ತಾರೆ.

ಇದೇ ಹಾಲಿನ ಪೌಡರ್ ​​ಬೇರೆ ಬೇರೆ ಪ್ಯಾಕೆಟ್​​​​ ಮಾಡಿ ಬ್ರ್ಯಾಂಡ್​ ಹೆಸರಲ್ಲಿ ಹೆಚ್ಚಿನ ಬೆಲೆ​​ಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Join Whatsapp