ಜಾತಿಗಳನ್ನು ಸೃಷ್ಟಿಸಿರುವುದು ದೇವರಲ್ಲ, ಪುರೋಹಿತರು: ಮೋಹನ್ ಭಾಗವತ್

Prasthutha|

ಮುಂಬೈ: ದೇವರು ಯಾವುದೇ ಜಾತಿ, ಪಂಥ, ಮತಗಳನ್ನು ಸೃಷ್ಟಿಸಲಿಲ್ಲ. ಈ ವೈರುದ್ಧ್ಯಗಳನ್ನು ಸೃಷ್ಟಿಸಿದ್ದು ಪುರೋಹಿತರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಮುಂಬೈನ ರವೀಂದ್ರ ನಾಟ್ಯ ಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಭಾಗವತ್, ಜಾತಿ ವ್ಯವಸ್ಥೆ ಭಾರತೀಯ ಸಮಾಜಕ್ಕೆ ಮಾರಕವಾಗಿದೆ. ನಮ್ಮ ಸೃಷ್ಟಿಕರ್ತನಿಗೆ ನಾವೆಲ್ಲರೂ ಸಮಾನರು. ಯಾವುದೇ ಜಾತಿ, ಪಂಥ, ಮತಗಳನ್ನು ಆತ ಸೃಷ್ಟಿಸಲಿಲ್ಲ. ಈ ವೈರುದ್ಧ್ಯಗಳನ್ನು ಸೃಷ್ಟಿಸಿದ್ದು ಪುರೋಹಿತರಾಗಿದ್ದಾರೆ. ಇದು ತಪ್ಪು ಎಂದು ಹೇಳಿದ್ದಾರೆ.

- Advertisement -