ಎಕ್ಸ್-ರೇ ಫಿಲ್ಮ್ ದುಬಾರಿ| ಕಾಗದದಲ್ಲಿ ಪರೀಕ್ಷಾ ವರದಿ ನೀಡುತ್ತಿರುವ ತಮಿಳುನಾಡು ಸರ್ಕಾರಿ ಆಸ್ಪತ್ರೆ!

Prasthutha|

ಚೆನ್ನೈ: ತಮಿಳುನಾಡಿನ ಕೋವಿಲ್ಪಟ್ಟಿ ಸರ್ಕಾರಿ ಆಸ್ಪತ್ರೆಯು ಕಾಗದದಲ್ಲಿ ಎಕ್ಸ್-ರೇ ವರದಿಗಳನ್ನು ನೀಡುತ್ತಿದೆ. ಆಸ್ಪತ್ರೆಯ ಅಧಿಕಾರಿಗಳು ಇದಕ್ಕೆ ನೀಡಿದ ಕಾರಣ ಎಕ್ಸ್-ರೇ ಫಿಲ್ಮ್ ಗಳು ದುಬಾರಿಯಾದುದರಿಂದ ಖರೀದಿಸಲು ಹಣವಿಲ್ಲ ಎಂದಾಗಿದೆ.

- Advertisement -


ಈ ಆಸ್ಪತ್ರೆಯು ಸುಮಾರು ಒಂದು ತಿಂಗಳಿನಿಂದ ಎಕ್ಸ್ ರೇ ವರದಿಗಳನ್ನು ಕಾಗದದಲ್ಲಿ ನೀಡಲಾಗುತ್ತಿದ್ದು, ವರದಿಯನ್ನು ಕಾಗದದಲ್ಲಿ ನೀಡುವುದರಿಂದ ಸರಿಯಾದ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ರೋಗಿಗಳ ಸಂಬಂಧಿಕರು ಹೇಳುತ್ತಾರೆ.


ಇಲ್ಲಿ ಎಕ್ಸ್-ರೇ ಫಿಲ್ಮ್ ನಲ್ಲಿ ವರದಿ ಪಡೆಯಲು 50 ರೂ. ನೀಡಬೇಕು. ಕಾಗದದಲ್ಲಿ ವರದಿ ಪಡೆಯುವುದಾದರೆ ಹೆಚ್ಚುವರಿ ಪಾವತಿಸಬೇಕೆಂದು ಇಲ್ಲ.
ಕಾಗದದಲ್ಲಿ ಎಕ್ಸ್ -ರೇ ವರದಿಗಳನ್ನು ನೀಡುವುದು ಫಿಲ್ಮ್ ಗಳಲ್ಲಿ ನೀಡುವುದಕ್ಕೆ ಸಮಾನವಾಗಿದೆ. ಎಕ್ಸ್-ರೇ ಶೀಟ್‌ಗಳನ್ನು ಟೆಂಡರ್ ಮಾಡುವಲ್ಲಿ ಕೆಲವು ಸಮಸ್ಯೆಗಳಿಂದಾಗಿ ಎಕ್ಸ್-ರೇ ಫಿಲ್ಮ್ ಗಳು ಲಭ್ಯವಾಗುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ವೈದ್ಯರಿಗೆ ಡಿಜಿಟಲ್ ಎಕ್ಸ್-ರೇ ಪರೀಕ್ಷಾ ವರದಿಗಳನ್ನು ನೀಡಿ ರೋಗಿಗಳಿಗೆ ಕಾಗದ ಮೂಲಕ ನೀಡಲಾಗುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp