ಸಾಯುವವರಿಗೆ ಏನ್ ಮಾಡಲು ಆಗುತ್ತೆ? ನಾನಂತು ಬದುಕಬೇಕು ಎಂದ ಉಮೇಶ್ ಕತ್ತಿ

Prasthutha|

►ಮತ್ತೆ ನಾಲಗೆ ಹರಿಬಿಟ್ಟ ಆಹಾರ ಸಚಿವ

ಬಾಗಲಕೋಟೆ: ರಾಜ್ಯಾದ್ಯಂತ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಜನತೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಪಡಿತರ ಅಕ್ಕಿ ಜಾಸ್ತಿ ಮಾಡಬೇಕೆಂದು ಕೇಳಿದ ವ್ಯಕ್ತಿಯೊಬ್ಬರಿಗೆ ಸಾಯುವಂತೆ ಹೇಳಿ ವಿವಾದಕ್ಕೀಡಾಗಿದ್ದ ಆಹಾರ ಸಚಿವ ಉಮೇಶ್ ಕತ್ತಿ ಇದೀಗ ಮತ್ತೆ ಅದೇ ರೀತಿಯ ಬೇಜವಾಬ್ದಾರಿಯುತ ಹೇಳಿಕೆ ನೀಡುವ ಮೂಲಕ ನಾಲಿಗೆ ಹರಿಬಿಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

- Advertisement -

ಬಾಗಲಕೋಟೆ ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಉಮೇಶ್ ಕತ್ತಿ ಅಧಿಕಾರಿಗಳ ಸಭೆಯಲ್ಲಿ, ಕೋವಿಡ್ ನಿಂದ ಹಲವರು ಸಾಯುತ್ತಿದ್ದಾರೆ. ರೆಮ್ ಡಿಸಿವಿರ್ ಕೊಟ್ಟರೂ ಜನ ಸಾಯುತ್ತಾರೆ ಅದಕ್ಕೆ ಏನು ಮಾಡಲು ಸಾಧ್ಯ? ಅವರಿಗೆ ಹಾರ್ಟ್ ಸಮಸ್ಯೆ, ಶುಗರ್ ಇರುತ್ತೆ. ಧೈರ್ಯ ಇಲ್ಲದವರು ಸಾಯುತ್ತಾರೆ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.

ಸಾಯುವವರು ಏಕೆ ಸತ್ತರೆಂದು ಹೇಳಲಾಗದು. ದೇಶದಲ್ಲಿ 130 ಕೋಟಿ ಜನಸಂಖ್ಯೆಯಿದೆ ಯಾರ್ಯಾರು ಯಾಕೆ ಸಾಯುತ್ತಿದ್ದಾರೆ ಎಂದು ಹೇಳಲಾಗುತ್ತಾ? ನೀವು ಉಳಿಯುತ್ತೀರೋ ಬಿಡ್ತಿರೋ ಆದರೆ ನಾವಂತು ಉಳಿಯಬೇಕು. ಎಂದು ಬೇಜವಾಬ್ದಾರಿಯಿಂದ ಅಪಹಾಸ್ಯ ಮಾಡಿ ನಕ್ಕಿದ್ದಾರೆ.

- Advertisement -

ಆಹಾರ ಸಚಿವರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ರಾಜ್ಯ ಕೋವಿಡ್ ನಿಂದ ಗಂಭೀರ ಸ್ಥಿತಿ ಎದುರಿಸುತ್ತಿದೆ. ಆದರೆ ಬೇಜವಾಬ್ದಾರಿತನದಲ್ಲಿ ಬಿಜೆಪಿಯ ಇಡೀ ಸಚಿವ ಸಂಪುಟ ಕಾಲ ಕಳೆಯುತ್ತಿದೆ. ಇದು ತಮಾಷೆಯ ಸಂದರ್ಭವೇ? ಎಂದು ಪ್ರಶ್ನಿಸಿದೆ.

Join Whatsapp