ವೀಕೆಂಡ್ ಕರ್ಫ್ಯೂ ಮಂಗಳೂರು ಭಾಗಶಃ ಬಂದ್

Prasthutha|

ಮಂಗಳೂರು: ಕೊರೋನಾ ಸೋಂಕು ಹೆಚ್ಚುತ್ತಿರುವ  ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದ್ದು, ಮಂಗಳೂರು ಭಾಗಶಃ ಬಂದ್ ಆಗಿದೆ.

- Advertisement -

ಶುಕ್ರವಾರ ರಾತ್ರಿ 10ರಿಂದ ಆರಂಭವಾಗಿದ್ದು, ಸೋಮವಾರ ಬೆಳಗ್ಗೆ 5ರ ತನಕ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 36 ಚೆಕ್ ಪೋಸ್ಟ್ ಹಾಕಲಾಗಿದ್ದು,ಗಡಿ ಭಾಗಗಳಲ್ಲಿ ಆರಕ್ಕೂ ಅಧಿಕ ತಪಾಸಣಾ ಕೇಂದ್ರ ತೆರೆಯಲಾಗಿದೆ.

- Advertisement -

ಜಿಲ್ಲೆಯಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರಿಲ್ಲದೆ ಖಾಸಗಿ, ಸರ್ಕಾರಿ ಬಸ್ ಗಳು ಖಾಲಿ ಖಾಲಿ ಆಗಿ ಕಂಡು ಬಂದಿದೆ.

ಕೊವೀಡ್ ವಿಕೆಂಡ್ ಕರ್ಫ್ಯೂ ಹಿನ್ನೆಲೆ. ಸ್ವತಃ ಮನಪಾ ಅಧಿಕಾರಿಗಳು ಫೀಲ್ಡಿಗಿಳಿದಿದ್ದು, ಪೊಲೀಸ್ ಚೆಕ್ ಪೋಸ್ಟ್ ಬಳಿ ಮಾಸ್ಕ್ ಇಲ್ಲದ ವಾಹನ ಸವಾರರಿಗೆ ದಂಡ ವಿಧಿಸಿದ್ದಾರೆ. ಬಸ್ ನಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸದಿದ್ದರೆ ಬಸ್ ಚಾಲಕ ನಿರ್ವಾಹಕ ದಂಡ ಭರಿಸಬೇಕು ಎಂದು ಮಂಗಳೂರು ಮನಪಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆ ಹೊಟೇಲ್ ನಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಿದ್ದು. ಆದೇಶ ಮೀರಿದಂತಹ ಹೊಟೇಲ್ ಗಳ ವಿರುದ್ಧ ಮನಪಾ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ.

Join Whatsapp