ಜಾರ್ಖಂಡ್: ಮುಸ್ಲಿಂ ಯುವಕನಿಗೆ ‘ಜೈಶ್ರೀ ರಾಮ್’ ಘೋಷಣೆ ಕೂಗುವಂತೆ ಆಗ್ರಹಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಮಾರಣಾಂತಿಕವಾಗಿ ಥಳಿಸಿ ಉಗುಳು ನೆಕ್ಕುವಂತೆ ಬಲವಂತಪಡಿಸಿದ ಘಟನೆ ಜಾರ್ಖಂಡ್ದ ಧನ್ಬಾದ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ವ್ಯಾಪಕ ವೈರಲ್ ಆಗಿದೆ. ಮುಸ್ಲಿಮ್ ಯುವಕನನ್ನು ಹಿಂಸಿಸುವಾಗ ಬಿಜೆಪಿ ಸಂಸದ ಪಿ.ಎನ್.ಸಿಂಗ್ ಮತ್ತು ಬಿಜೆಪಿ ಎಂಎಲ್ಎ ರಾಜ್ ಸಿನ್ಹಾ ಸ್ಥಳದಲ್ಲಿದ್ದರು ಎನ್ನಲಾಗಿದೆ.
ವೀಡಿಯೋ ವೀಕ್ಷಿಸಿ…
ಪಂಜಾಬ್ ನಲ್ಲಿ ಪ್ರಧಾನಿ ಮೋದಿಗೆ ಭದ್ರತೆ ಲೋಪವಾಗಿದೆ ಎಂದು ಆರೊಪಿಸಿ ಧನ್ಬಾದ್ ಜಿಲ್ಲೆಯ ಗಾಂಧಿ ಚೌಕದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಟ್ವೀಟ್ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.