CFI ರಾಜ್ಯಾಧ್ಯಕ್ಷರ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲು ಎ.ಜಿ.ಗೆ ಮನವಿ: ಪ್ರಮೋದ್ ಮುತಾಲಿಕ್

Prasthutha|

ಧಾರವಾಡ: ಹಿಜಾಬ್ ತೀರ್ಪು ವಿರುದ್ಧ ಸಿಎಫ್ ಐ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವಂತೆ ಅಡ್ವೊಕೇಟ್ ಜನರಲ್ ಬಳಿ ಮನವಿ ಮಾಡಿರುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಹಿಜಾಬ್ ಕುರಿತು ನ್ಯಾಯಾಲಯ ನೀಡಿರುವ ತೀರ್ಪಿಗೆ ಅಗೌರವ ತೋರಲಾಗಿದೆ, ಹೀಗಾಗಿ ಅವರ ವಿರುದ್ಧ ಕೇಸು ದಾಖಲಾಗಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಧಾರವಾಡದಲ್ಲಿ ಮಾತನಾಡಿದ ಮುತಾಲಿಕ್, ಆರು ಮಂದಿ ವಿದ್ಯಾರ್ಥಿನಿಯರು ಸುದ್ದಿಗೋಷ್ಠಿಯಲ್ಲಿ ಹೈ-ಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಾರೆ, ಅಲ್ಲದೇ ಸಿಎಫ್ ಐ ರಾಜ್ಯಾಧ್ಯಕ್ಷ ಅಥಾವುಲ್ಲಾ ನಿನ್ನೆಯ ಹಿಜಾಬ್ ಹೈಕೋರ್ಟ್ ಆದೇಶವನ್ನು ಅಸಾಂವಿಧಾನಿಕ ಎಂದು ಹೇಳುವ ಮೂಲಕ ಕೋರ್ಟ್  ಗೆ ಅವಮಾನ ಮಾಡಿದ್ದಾರೆ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ಹಾಕಲು ಎಜಿ ಅವರಿಗೆ ಅನುಮತಿ ಕೇಳಿದ್ದೇವೆ ಎಂದಿದ್ದಾರೆ.

ಧಾರವಾಡ ಹೈಕೋರ್ಟ್ನಲ್ಲಿ ಹೆಚ್ಚುವರಿ ಎಜಿ ವಿದ್ಯಾವತಿ ಅವರಲ್ಲಿ ಕೇಸು ದಾಖಲಿಸುವಂತೆ ಮನವಿ ಮಾಡಿದ್ದೇವೆ, ಮೇಲಾಧಿಕಾರಿ ಬಳಿ ಚರ್ಚಿಸಿ ಕೇಸಿನ ಬಗ್ಗೆ ತಿಳಿಸುತ್ತೇವೆ ಎಂದಿದ್ದಾರೆ, ತೀರ್ಪಿನ ಕುರಿತು ಅರ್ಜಿದಾರರಿಗೆ ಮೇಲ್ಮನವಿ ಸಲ್ಲಿಸುವ ಅವಕಾಶಗಳಿವೆ, ಆದರೆ  ಈ ರೀತಿ ಅಗೌರವ ತೋರಬಾರದು ಎಂದು ಮುತಾಲಿಕ್ ಹೇಳಿದ್ದಾರೆ.

- Advertisement -

Join Whatsapp