‘ನಾವು ಗಾಂಧಿಯನ್ನೇ ಬಿಟ್ಟಿಲ್ಲ, ನಿಮ್ಮನ್ನು ಬಿಡ್ತೀವಾ’: ಬಿಜೆಪಿಗೆ ಹಿಂದೂ ಮಹಾಸಭಾ ಬೆದರಿಕೆ

Prasthutha|

ಮಂಗಳೂರು: ಹಿಂದೂಗಳ ಮೇಲೆ ದಾಳಿಯಾದಾಗ ನಾವು ಗಾಂಧಿಯನ್ನೇ ಬಿಟ್ಟಿಲ್ಲ, ಇನ್ನು ನಿಮ್ಮನ್ನು ಬಿಡುತ್ತೇವಾ ಎಂದು ಮಂಗಳೂರಿನಲ್ಲಿ ಹಿಂದೂ ಮಹಾ ಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಬೆದರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ  ದೇವಾಲಯ ಧ್ವಂಸ ಖಂಡನೀಯ, ಸುಪ್ರೀಂ ಕೋರ್ಟ್ ಆದೇಶ ಎಂದು ಹಿಂದೂ ಶ್ರದ್ದಾ ಕೇಂದ್ರದ ಮೇಲೆ  ಬಿಜೆಪಿಯವರು ದಾಳಿ ಮಾಡುತ್ತಿದ್ದಾರೆ. ಇವರು ಕೇವಲ ಹಿಂದೂ ದೇಗುಲಗಳೇ ಗುರಿ ಮಾಡುತ್ತಾ ಇದ್ದಾರೆ. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಇವರ  ವಿರುದ್ಧವೇ ಸಹ ಪರಿವಾರದವರು ಪ್ರತಿಭಟನೆ ಮಾಡುತ್ತಿದ್ದಾರೆ. ಇವರಿಗೆ ಅಷ್ಟು ಅಭಿಮಾನ ಇದ್ದರೆ ಸರ್ಕಾರವನ್ನು ಬಹಿಷ್ಕರಿಸಲಿ. ಮತ್ತೆ ಬಿಜೆಪಿಗೆ ಸಹ ಪರಿವಾರಗಳು ಬೆಂಬಲ ನೀಡುವುದಿಲ್ಲ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.

- Advertisement -

ಇನ್ನು  ದೇವಾಲಯ ಧ್ವಂಸವು  ಪಕ್ಷದಿಂದ ಆದ ಸಣ್ಣ ತಪ್ಪು ಎಂದು ಬಿಜೆಪಿ ಹೇಳುತ್ತಿದೆ. ಇವರ  ಪ್ರಕಾರ  ದೇವಾಲಯ ಧ್ವಂಸ ಸಣ್ಣ ತಪ್ಪಾದರೆ ದೊಡ್ದ ತಪ್ಪು ಯಾವುದು ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ದೇವಾಲಯ  ಮತ್ತೆ ನಿರ್ಮಾಣ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಯಾರ ಹಣದಲ್ಲಿ ದೇವಾಲಯ ಮರುನಿರ್ಮಾಣ ಮಾಡುತ್ತಾರೆ.

ಬಿಜೆಪಿ ದೇವಾಲಯ ಧ್ವಂಸದ ಮೂಲಕ ಅಲ್ಪಸಂಖ್ಯಾತ ಮತ ಗಳಿಕೆಗೆ ಮುಂದಾಗಿದೆ. ಇವರ ವಿರುದ್ಧ ಹಿಂದೂ ಮಹಾ ಸಭಾ ಮುಂದಿನ ಚುನಾವಣೆ ವರೆಗೆ ಹೋರಾಟ ಮಾಡುತ್ತದೆ.

ಹಿಂದೂಗಳ ಮೇಲೆ ದಾಳಿ  ಆದಾಗ ಗಾಂಧಿಯನ್ನೇ ಬಿಟ್ಟಿಲ್ಲ, ಗಾಂಧಿಯನ್ನೇ ಹತ್ಯೆ ಮಾಡಿದ್ದೇವೆ ಇನ್ನೂ ನಿಮ್ಮನ್ನು ಬಿಡುತ್ತೇವಾ. ಬಿಜೆಪಿಯು ಒಂದು ಬೆನ್ನು ಮೂಳೆ ಇಲ್ಲದ ಸರ್ಕಾರ, ಇವರಿಗಿಂತ ತಾಲಿಬಾನ್ ಗಳು ವಾಸಿ. ಇವರ ಸರ್ಕಾರ ತಾಲಿಬಾನ್ ಗಳಿಗಿಂತ ಕೀಳು ಎಂದು ಗುಡುಗಿದರು.

- Advertisement -