ಹಿರಿಯ ರಂಗನಟ ಸೀತಾರಾಮ ಶೆಟ್ಟಿ ನಿಧನ

Prasthutha: January 28, 2022

ಮಂಗಳೂರು: ತುಳು ನಾಟಕ ರಂಗದ ಹಿರಿಯ ಕಲಾವಿದದ, ದಿ. ಕೆ. ಎನ್. ಟೈಲರ್ ರವರ ನಾಟಕ, ಚಲನ ಚಿತ್ರ ರಂಗದ ಒಡನಾಡಿ ಆಗಿದ್ದ ಜೆ. ಸೀತಾರಾಮ ಶೆಟ್ಟಿ  ಅವರು  ಪಚ್ಚನಾಡಿಯ ಸ್ವಗೃಹದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಸುಮಾರು 65 ವರ್ಷಗಳಿಂದ ತುಳು ನಾಟಕ ರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಕಲಾಸೇವೆಯಲ್ಲಿ ತೊಡಗಿರುವ ಅವರು ಕೆ. ಎನ್. ಟೇಲರ್ ರವರ ಗಣೇಶ ನಾಟಕ ಸಭಾದಲ್ಲಿ 48 ವರ್ಷಗಳ ಕಾಲ ಸಕ್ರಿಯರಾಗಿದ್ದರು. ತನ್ನ 80ರ ಹರೆಯದಲ್ಲೂ ಪುರಭವನದಲ್ಲಿ ನಡೆದ ಸೀತಾರಾಮ 80ರ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಂದ ಸನ್ಮಾನಿಸಲ್ಪಟ್ಟು, ತಾನು ನಟಿಸಿದ ನಾಟಕದ ವಿವಿಧ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿರುವುದೇ ಅವರ ಕಲಾ ಜೀವನದ ಕೊನೆಯ ಅಭಿನಯವಾಗಿರುತ್ತದೆ. ಅವರು ಪತ್ನಿ, ನಾಲ್ವರು ಪುತ್ರಿಯರನ್ನು, ಅಗಲಿರುತ್ತಾರೆ. ಅವರ ನಿಧನಕ್ಕೆ ತುಳು ನಾಟಕ ಕಲಾವಿದರ ಒಕ್ಕೂಟ, ಕಲಾ ಸಂಗಮ ಮಂಗಳೂರು, ಚಾ ಪರ್ಕ ಕಲಾವಿದರ ತಂಡ, ಲಕುಮಿ ನಾಟಕ ತಂಡ ಸಂತಾಪ ಸೂಚಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!